ಮೀರತ್. ಮಾ.28- ರಂಜಾನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೀರತ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಮೀರುವವರ ಅವರ ಪಾಸ್ ಪೋರ್ಟ್‌ಗಳನ್ನು ಮತ್ತು ಚಾಲನಾ ಪರವಾನಗಿಗಳನ್ನು ರದ್ದುಗೊಳಿಸಲು ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ದಾಗಳಲ್ಲಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಮತ್ತು ರಸ್ತೆಗಳಲ್ಲಿ ಯಾರೂ ನಮಾಜ್ ಮಾಡಬಾರದು ಎಂದು ಮೀರತ್ ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ವಿಕ್ರಮ್ ಸಿಂಗ್ ಪುನರುಚ್ಚರಿಸಿದ್ದಾರೆ.
ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾದರೆ, ಅವರ ಪಾಸ್ಪೋರ್ಟ್ ಮತ್ತು ಪರವಾನಗಿಗಳನ್ನು ರದ್ದುಗೊಳಿಸಬಹುದು ಮತ್ತು ನ್ಯಾಯಾಲಯದಿಂದ ನೋ ಆಬ್ಲೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಇಲ್ಲದೆ ಹೊಸ ಪಾಸ್ಪೋಟ್ ೯ ಪಡೆಯುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ನ್ಯಾಯಾಲಯವು ವ್ಯಕ್ತಿಗಳನ್ನು ತೆರವುಗೊಳಿಸುವವರೆಗೂ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ದಳ ನಾಯಕ ಜಯಂತ್ ಸಿಂಗ್ ಚೌಧರಿ ಹೇಳಿದ್ದಾರೆ. ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್ಪಿ) ವಿಪಿನ್ ಟಾಡಾ ಮಾತನಾಡಿ, ಜಿಲ್ಲಾ ಮತ್ತು ಪೊಲೀಸ್ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಈ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.