Wednesday, April 2, 2025
Homeರಾಜ್ಯಇದು ಸುಲಿಗೆ ಸರ್ಕಾರ, ಹಾಲಿನ ದರ ಏರಿಕೆಗೆ ಸಚಿವ ಸಚಿವ ಹೆಚ್ಡಿಕೆ ಆಕ್ರೋಶ

ಇದು ಸುಲಿಗೆ ಸರ್ಕಾರ, ಹಾಲಿನ ದರ ಏರಿಕೆಗೆ ಸಚಿವ ಸಚಿವ ಹೆಚ್ಡಿಕೆ ಆಕ್ರೋಶ

This is extortion government of , Minister HDK is angry over the increase in milk prices

ಬೆಂಗಳೂರುಮಾ.28- ರಾಜ್ಯದಲ್ಲಿರುವ ಕಾಂಗ್ರೆಸ್‌‍ ಪ್ರಜಾಪ್ರಭುತ್ವ ಸರ್ಕಾರವಲ್ಲ. ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌‍.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ವ್ಯಂಗ್ಯವಾಡಿದ್ದಾರೆ.ಹಾಲು ಹಾಲಾಹಲ, 3ನೇ ಸಲ ಹಾಲು ದರ ಏರಿಕೆ ಮಾಲಾಗಿದೆ.

2023ರ ಆಗಸ್ಟ್‌ ನಲ್ಲಿ 3ರೂ, 2024ರ ಜೂನ್‌ ನಲ್ಲಿ 2 ರೂ. ಈಗ 4 ರೂ. ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.ವಿದ್ಯುತ್‌ ಶಾಕ್‌: ಈಗ ಎಲ್ಲರಿಗೂ ಪ್ರತಿ ಯೂನಿಟ್‌ ವಿದ್ಯುತ್‌ಗೆ 36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು ಕಾಕಾ ಪಾಟೀಲಗೂ ಶಾಕು ಎಂದು ಅವರು ಟೀಕಿಸಿದ್ದಾರೆ.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್‌ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್‌ ಗೆ ಕಂಪನಿ ಆಡಳಿತ ನಡೆಸುತ್ತಿದೆ ಸರ್ಕಾರ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮೊಸರು ದರ 4 ರೂ.ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್‌ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಅವರು ಆಗ್ರಹಿಸಿದ್ದಾರೆ.ಇದು ಈಸ್ಟ್‌ ಇಂಡಿಯಾ ಕಾಂಗ್ರೆಸ್‌‍ ಕಂಪನಿ. ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್‌ ಇಂಡಿಯಾ ಕಾಂಗ್ರೆಸ್‌‍ ಕಂಪನಿ ಕಪಿಮುಷ್ಟಿಯಲ್ಲಿದೆ ಎಮದು ಅವರು ಆರೋಪಿಸಿದ್ದಾರೆ.

RELATED ARTICLES

Latest News