Saturday, April 5, 2025
Homeರಾಷ್ಟ್ರೀಯ | Nationalಸುಧೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಬಹು ನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಪಾಸ್

ಸುಧೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಬಹು ನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಪಾಸ್

After a long debate, the much-awaited Waqf Amendment Bill-2024 passed in the Lok Sabha

ನವದೆಹಲಿ,ಏ.3- ಸುಧೀರ್ಘ ಚರ್ಚೆಯ ನಂತರ ಪ್ರತಿಪಕ್ಷ ಮತ್ತು ಕೆಲವು ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಹು ನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಕ್ಕೆ ಲೋಕಸಭೆಯಲ್ಲಿ ಇಂದು ಅಂಗೀಕಾರ ಪಡೆದುಕೊಂಡಿದೆ. ಇನ್ನು ರಾಜ್ಯ ಸಭೆಯಲ್ಲಿ ಅಂಗೀಕಾರವಾಗುವುದಷ್ಟೇ ಬಾಕಿ ಇದೆ.

ರಾಜ್ಯಸಭೆಯಲ್ಲೂ ಈ ವಿಧೇಯಕ ಮಂಡನೆಯಾಗಲಿದ್ದು, ಮೈತ್ರಿ ಪಕ್ಷಗಳ ನೆರವಿನಿಂದ ಮೇಲನೆಯಲ್ಲೂ ಅಂಗೀಕಾರ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಎನ್‌ಡಿಎ ಇದೆ.ಒಂದು ವೇಳೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದರೆ ನಂತರ ರಾಷ್ಟ್ರಪತಿಗಳ ಸಹಿಗೆ ಕಳುಹಿಸಿಕೊಡಲಿದ್ದು, ಬಳಿಕ ಕಾನೂನಾಗಿ ಮಾರ್ಪಡಲಿದೆ. ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಸುಮಾರು 12 ಗಂಟೆಗೂ ಹೆಚ್ಚು ಕಾಲ ವಿಧೇಯಕದ ಮೇಲೆ ಚರ್ಚೆ ನಡೆಸಿದರು.ಸದಸ್ಯರೆಲ್ಲರೂ ವಿಧೇಯಕದ ಮೇಲೆ ಮಾತನಾಡಿದ ನಂತರ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಜು ಅವರು ಸ್ಪಷ್ಟನೆ ನೀಡಿ, ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡರು.

ವಿಧೇಯಕವನ್ನು ಮತಕ್ಕೆ ಹಾಕುವಂತೆ ಪ್ರತಿಪಕ್ಷಗಳ ಸದಸ್ಯರು ಮಾಡಿಕೊಂಡ ಮನವಿಯನ್ನು ಸ್ಪೀಕರ್ ಓಂ ಬಿರ್ಲಾ ಅವರು ಪುರಸ್ಕರಿಸಿದರು. ಬಳಿಕ ವಿಧೇಯಕವನ್ನು ಮತಕ್ಕೆ ಹಾಕಿದರು.ಸದನದಲ್ಲಿ ಹಾಜರಿದ್ದ ಒಟ್ಟು 390 ಸದಸ್ಯರ ಪೈಕಿ ವಿಧೇಯಕದ ಪರವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು 226 ಮತಗಳನ್ನು ಚಲಾಯಿಸಿದರು.ವಿಧೇಯಕದ ವಿರುದ್ದವಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ 163 ಸದಸ್ಯರು ಮತ ಚಲಾವಣೆ ಮಾಡಿದರು. ಓರ್ವ ಸದಸ್ಯರು ಗೈರು ಹಾಜರಾಗಿದ್ದರು.ಅಂತಿಮವಾಗಿ ವಿಧೇಯಕದ ಪರ ಹೆಚ್ಚಿನ ಮತಗಳು ಚಲಾವಣೆಯಾಗಿದ್ದರಿಂದ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು.ನಿಗದಿಯಂತೆ ಇಂದು ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಅವರು ವಿಧೇಯಕವನ್ನು ಮಂಡನೆ ಮಾಡಿದರು.

ಬಳಿಕ ಸದನದಲ್ಲಿ ಕಾವೇರಿದ ಚರ್ಚೆಗೆ ನಾಂದಿ ಹಾಡಲಾಯಿತು. ವಿಧೇಕಯದ ಪರವಾಗಿ ಕೇಂದ್ರ ಸಚಿವರಾದ ಕಿರಣ್ ರಿಜಜು, ಅಮಿತ್ ಶಾ, ಲೋಕಸಭಾ ಸದಸ್ಯರಾದ ರವಿಶಂಕ‌ರ್ ಪ್ರಸಾದ್‌, ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್, ಸಂಬಿತ್ಪಾತ್ರ, ಜಗದಾಂಬಿಕ ಪಾಲ್, ನಿತೀಶ್ ಚೌಧರಿ, ನಿಶಿಕಾಂತ್ ದುಬೆ, ಅಭಿಷೇಕ್ ಗಂಗೂಲಿ, ಸ್ಪಿತಾ ಉದಯ್ ವಾಗ್, ಕಮಲ್ಟಿತ್ ಶರಾವತ್ ಜೆಡಿಯುನಿಂದ ಲಲನ್ ಸಿಂಗ್, ಟಿಡಿಪಿ ಶಿವಸೇನೆ ಸೇರಿದಂತೆ ಮತ್ತಿತರ ಸದಸ್ಯರು ಮಾತನಾಡಿದರು.

ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಪರವಾಗಿ ಉಪ ನಾಯಕ ತರುಣ್ ಗೋಗಯ್, ಕೆ.ಸಿ.ವೇಣುಗೋಪಾಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಐಎಡಿಎಂಕೆ ಎ ರಾಜ ಸೇರಿದಂತೆ ಹಲವಾರು ಸದಸ್ಯರು ಮಾತನಾಡಿ, ವಿಧೇಯಕವನ್ನು ಪ್ರಬಲವಾಗಿ ವಿರೋಧಿಸಿದರು.

ಇದಕ್ಕೂ ಮುನ್ನ ಮಸೂದೆ ಮೇಲೆ ಸುಧೀರ್ಘವಾಗಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 25 ರಾಜ್ಯಗಳ ವಕ್ಸ್ ಬೋರ್ಡ್ ಅಭಿಪ್ರಾಯವನ್ನು ನಾವು ಸಂಗ್ರಹಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎರಡೂ ಸದನಗಳ ಸದಸ್ಯರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಸ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ ವಾದಗಳನ್ನು ಮಂಡಿಸಿದ್ದವು. ಅವುಗಳನ್ನು ಪರಿಗಣಿಸಿಯೇ ಮಸೂದೆಯನ್ನು ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ಸಿಟ್ಟಿಗೆದ್ದ ಪ್ರತಿಪಕ್ಷ ನಾಯಕರು ಮೋದಿ ಸರ್ಕಾರ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಸಮಗ್ರ ಚರ್ಚೆಗೆ ಅವಕಾಶ ಕೊಡದೇ ಮಸೂದೆ ಮಂಡಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಅಬ್ಬರಿಸಿದ ಅಮಿತ ಷಾ:
ವಿಧೇಯಕದ ಮೇಲೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ವಕ್ಸ್ ಮಂಡಳಿಯ ಮುಸ್ಲಿಮೇತರ ಸದಸ್ಯರು ಧಾರ್ಮಿಕ ವ್ಯವಹಾರಗಳನ್ನು ನಡೆಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಆದ್ದರಿಂದ ವಕ್ಸ್‌ ಬಿಲ್ ಮುಸ್ಲಿಂ ವಿರೋಧಿಯಲ್ಲ. ಆದರೆ ವಿರೋಧ ಪಕ್ಷದ ನಾಯಕರು, ಮಸೂದೆಯ ಬಗ್ಗೆ ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

ತಮ್ಮ ಮಾತಿನುದ್ದಕ್ಕೂ ಪ್ರತಿಪಕ್ಷಗಳ ವಿರುದ್ಧ ಅಬ್ಬರಿಸಿದ ಅಮಿತ್ ಷಾ, 1913 ರಿಂದ 2013 ರವರೆಗೆ ವಕ್ಸ್ ಮಂಡಳಿಯ ಅಡಿಯಲ್ಲಿ 18 ಲಕ್ಷ ಎಕರೆ ಭೂಮಿ ಇತ್ತು, ಆದರೆ 2013-2025 ರವರೆಗೆ ಹೆಚ್ಚುವರಿಯಾಗಿ 21 ಲಕ್ಷ ಎಕರೆ ಭೂಮಿಯನ್ನು ಸೇರಿಸಲಾಗಿದೆ. ವಿರೋಧ ಪಕ್ಷಗಳು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.2013 ರಲ್ಲಿ ವಕ್ಸ್‌ಗೆ ತಿದ್ದುಪಡಿಗಳನ್ನು ಪರಿಚಯಿಸಿದಾಗ, ಲಾಲು ಪ್ರಸಾದ್ ಯಾದವ್ ಅವರು ಕಠಿಣ ಕಾನೂನು ಬೇಕು ಮತ್ತು ಕಳ್ಳತನ ಮಾಡುವವರನ್ನು ಜೈಲಿಗೆ ಹಾಕಬೇಕೆಂದು ಹೇಳಿದರು. ನರೇಂದ್ರ ಮೋದಿ ಅವರು ಲಾಲು ಪ್ರಸಾದ್ ಯಾದವ್ ಅವರ ಆಶಯಗಳನ್ನು ಪೂರೈಸಿದ್ದಾರೆ ಎಂದು ಪರೋಕ್ಷವಾಗಿ ಚುಚ್ಚಿದರು.

ವಕ್ಸ್ ಮಂಡಳಿಯ ಮುಸ್ಲಿಮೇತರ ಸದಸ್ಯರು ಧಾರ್ಮಿಕ ವ್ಯವಹಾರಗಳನ್ನು ನಡೆಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದ್ದರಿಂದ ವಕ್ಸ್ ಬಿಲ್ ಮುಸ್ಲಿಂ ವಿರೋಧಿಯಲ್ಲ. ಆದರೆ ವಿರೋಧ ಪಕ್ಷದ ನಾಯಕರು, ಮಸೂದೆಯ ಬಗ್ಗೆ ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.ಈಗ ಕೇವಲ ಘೋಷಣೆಯಿಂದ ಯಾರ ಭೂಮಿಯೂ ವಕ್ಸ್ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನವನ್ನು ಕೈಗೆ ತೆಗೆದುಕೊಂಡು ಬೀಸುವುದು ಈಗ ಫ್ಯಾಷನ್ ಆಗಿದೆ. ಸಂವಿಧಾನದ ಪ್ರಕಾರ, ಸರ್ಕಾರ ಅಥವಾ ಯಾವುದೇ ಖಾಸಗಿ ಸಂಸ್ಥೆಯ ಯಾವುದೇ ನಿರ್ಧಾರವು ನ್ಯಾಯಾಲಯದ ಹೊರಗೆ ಹೇಗೆ ಇರಲು ಸಾಧ್ಯ? ಯಾವುದೇ ನಿರ್ಧಾರ ಬಂದರೂ, ಆ ನಿರ್ಧಾರ ಜಾರಿಗೆ ಬರುವವರೆಗೆ ಈ ದೇಶದ ನ್ಯಾಯಾಲಯವು ಆಸಕ್ತಿ ವಹಿಸುವುದಿಲ್ಲ.

ನಾಗರಿಕರು ತಮ್ಮ ಆಸ್ತಿಯನ್ನು ಕಳೆದುಕೊಂಡು ಎಲ್ಲಿಗೆ ಹೋಗುತ್ತಾರೆ?, ಭೂಮಿಯನ್ನು ಕಬಳಿಸಲ್ಪಟ್ಟ ಜನರು ಎಲ್ಲಿಗೆ ಹೋಗುತ್ತಾರೆ?, ಇದು ಈ ರೀತಿ ಕೆಲಸ ಮಾಡುವುದಿಲ್ಲ. ನಿಮ್ಮ ಮತ ಬ್ಯಾಂಕ್‌ಗಾಗಿ ನೀವು ಏನು ಮಾಡಿದ್ದೀರಿ? ನಾವು ಅದನ್ನು ತಿರಸ್ಕರಿಸುತ್ತಿದ್ದೇವೆ ಎಂದು ಹೇಳಿದರು. ಇನ್ನೊಂದೆಡೆ ಈ ಕಾಯ್ದೆಯು ಮುಸ್ಲಿಮರ ಧಾರ್ಮಿಕ ನಡವಳಿಕೆಗೆ ಅಡ್ಡಿಯಾಗುತ್ತದೆ ಮತ್ತು ಅವರು ದಾನ ಮಾಡಿದ ಆಸ್ತಿಗೆ ತೊಡಕಾಗುತ್ತದೆ ಎಂಬ ದೊಡ್ಡ ತಪ್ಪು ಕಲ್ಪನೆ ಇದೆ. ಆದರೆ, ಇದು ತಮ್ಮ ಮತ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲು ಕೆಲವರು ಈ ತಪ್ಪು ಕಲ್ಪನೆಯನ್ನು ಹರಡುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.ಇದರೊಂದಿಗೆ, ಮುಸ್ಲಿಮೇತರ ಸದಸ್ಯರು ಮಂಡಳಿ ಮತ್ತು ವಕ್ಸ್ ಮಂಡಳಿಯ ಭಾಗವಾಗಿರುತ್ತಾರೆ. ಆದರಂತೆ, ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಅವರ ಕೆಲಸವಲ್ಲ. ವಕ್ಸ್ ಕಾನೂನಿನ ಆಡಳಿತ ಮತ್ತು ದೇಣಿಗೆಗಾಗಿ ನೀಡಲಾಗುವ ಹಣ ಸುಗಮವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುವುದು ಅವರ ಕೆಲಸ ಎಂದು ಅವರು ವಿವರಿಸಿದರು.

ಸದಸ್ಯರು ಆಡಳಿತವು ಕಾನೂನಿನ ಪ್ರಕಾರ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ದೇಣಿಗೆಗಳನ್ನು ಅವರು ಉದ್ದೇಶಿಸಿದ ಉದ್ದೇಶಕ್ಕೆ ಬಳಸಲಾಗುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸುತ್ತಾರೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

ವಕ್ಸ್ ದಾನವನ್ನು ಒಬ್ಬರ ಸ್ವಂತ ಆಸ್ತಿಯಿಂದ ಮಾಡಬಹುದೇ ವಿನಃ, ಅದಕ್ಕೆ ಬೇರೆಯವರ ಆಸ್ತಿಯನ್ನು ಬಳಸುವಂತಿಲ್ಲ, ಯಾಕೆಂದರೆ, ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕಿದೆ. ಒಬ್ಬರು ಅದನ್ನು ಉತ್ಸಾಹದಿಂದ ಮಾಡಬಹುದು, ಆದರೆ ದುರಾಸೆ, ಲಾಭದ ಆಸೆ ಅಥವಾ ಭಯದಿಂದ ಧರ್ಮ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಬಡವನಿಗೆ ಅನ್ನವಿಲ್ಲದಿದ್ದರೆ, ನೀನು ಅವನಿಗೆ ಊಟ ಕೊಟ್ಟು ಅವನ ಧರ್ಮವನ್ನು ಬದಲಾಯಿಸಿದರೆ, ಇದು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ವಿಧೇಯಕದ ಮೇಲೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು 10 ಗಂಟೆ ಸಮಯವನ್ನು ನಿಗದಿಪಡಿಸಿದ್ದರು. ಆಡಳಿತ ಪಕ್ಷಕ್ಕೆ 5 ಗಂಟೆ ಹಾಗೂ ಪ್ರತಿಪಕ್ಷಗಳಿಗೆ 5 ಗಂಟೆ ಸಮಯವನ್ನು ನಿಗದಿಪಡಿಸಲಾಗಿತ್ತು. ಬಿಜೆಪಿ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು, ಶಿವಸೇನೆ (ಏಕನಾಥ್ ಶಿಂಧೆ ಬಣ), ಎಲ್ಲೆಪಿ, ಪವನ್ ಕಲ್ಯಾಣ್ ನೇತೃತ್ವದ ಜನಸೇನ, ಜೆಡಿಎಸ್, ಎನ್ಸಿಪಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿದ್ದವು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ವಿಪ್ ಜಾರಿ ಮಾಡಲಾಗಿತ್ತು.

ವಕ್ಸ್ ಮಸೂದೆ ಎಂದರೇನು:
ವಕ್ಸ್ (ತಿದ್ದುಪಡಿ) ಮಸೂದೆ 2024, 1995ರ ವಕ್ಸ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯಾಗಿದೆ. ವಕ್ಸ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟುವಿಕೆಗಾಗಿ ನಿಯಮಗಳನ್ನು ಬಿಗಿಗೊಳಿಸುವುದು ಇದರ ಉದ್ದೇಶವಾಗಿದೆ.

ಇದು ವಕ್ಸ್ ಮಂಡಳಿಯಲ್ಲಿ ಮುಸ್ಲಿಮೇತರರು ಮತ್ತು ಮಹಿಳಾ ಸದಸ್ಯರನ್ನು ಸೇರಿಸುವುದು, ಕಲೆಕ್ಟರ್‌ಗೆ ಆಸ್ತಿಯನ್ನು ಸಮೀಕ್ಷೆ ಮಾಡುವ ಹಕ್ಕು ನೀಡುವುದು ಮತ್ತು ವಕ್ಸ್ ನ್ಯಾಯಮಂಡಳಿಯ ನಿರ್ಧಾರಗಳನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸುವ ನಿಬಂಧನೆ ಒಳಗೊಂಡಿದೆ.

ತಿದ್ದುಪಡಿ ಮಸೂದೆಯಲ್ಲಿ ಏನಿದೆ? :
ಸರ್ವೆಯನ್ನು ರಾಜ್ಯ ಸರ್ಕಾರ ನೇಮಿಸಿದ ಸರ್ವೆ ಆಯುಕ್ತರು ನಡೆಸಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು. ಸರ್ವೆಗಳನ್ನು ಡಿಸಿಗಳಿಗೆ ವರ್ಗಾಯಿಸಲಾಗಿದೆ. ಡಿಸಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಸ್‌ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ. ವಕ್ಸ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ ಆಸ್ತಿಯನ್ನು ವಕ್ಸ್ ಆಗಿ ಘೋಷಿಸಬಹುದಿತ್ತು.

ಹೊಸ ತಿದ್ದುಪಡಿ :
ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಸ್ ಘೋಷಿಸುವ ಅಧಿಕಾರ ನೀಡಲಾಗಿದೆ. ಇದರಿಂದ ದುರುಪಯೋಗ ತಡೆಗಟ್ಟುವ ಉದ್ದೇಶವಿದೆ.

ಮಹಿಳೆಯರಿಗೆ ಆಸ್ತಿ ಹಕ್ಕು ಹಿಂದಿನ ಕಾನೂನು: ಮಹಿಳೆಯರಿಗೆ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿ ಪಡಿಸುವ ನಿರ್ದಿಷ್ಟ ಉಲ್ಲೇಖ ಇರಲಿಲ್ಲ.

ಹೊಸ ತಿದ್ದುಪಡಿ :
ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿ ಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣನೆ.

ಹಿಂದಿನ ಕಾನೂನು :
ಕೇಂದ್ರ, ರಾಜ್ಯ ವಕ್ಸ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ.

ಹೊಸ ತಿದ್ದುಪಡಿ :
ಕೇಂದ್ರ ವಕ್ಸ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು, ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯ. ಇದೇ ರೀತಿ ರಾಜ್ಯವಕ್ಸ್‌ ಮಂಡಳಿಗಳಲ್ಲಿಯೂ ಈ ಬದಲಾವಣೆ ತರಲಾಗಿದೆ.

ಲೆಕ್ಕ ಪರಿಶೋಧನೆ :
ಹಿಂದಿನ ಕಾನೂನು ;
ವಕ್ಸ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು.
ಹೊಸ ತಿದ್ದುಪಡಿ
ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.
ಆಸ್ತಿ ನೋಂದಣಿ ಮತ್ತು ಪಾರದರ್ಶಕತೆ :
ಹಿಂದಿನ ಕಾನೂನು;
ವಕ್ಸ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯ ಮಿತಿ ಇರಲಿಲ್ಲ.
ಹೊಸ ತಿದ್ದುಪಡಿ :
ಎಲ್ಲ ವಕ್ಸ್‌ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯ. 6 ತಿಂಗಳೊಳಗೆ ವಿವರ ಸಲ್ಲಿಸಬೇಕು. ಪ್ರತಿ 5 ವರ್ಷಕ್ಕೊಮೆ ಸರ್ವೆ ನಡೆಸಬೇಕು.

RELATED ARTICLES

Latest News