ಬೆಂಗಳೂರು,ಏ.3-ವಿದ್ಯುತ್ ದರ ಏರಿಕೆ ನಡುವೆ ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ವಿರೋಧ ವ್ಯಕ್ತಪಡಿಸಿದೆ ಸರ್ಕಾರದ ಈ ಕ್ರಮವು ಸಣ್ಣ ಹಾಗು ಮಧ್ಯಮ ಕೈಗಾರಿಕೆಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಿದೆ ಎಂದು ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಣ್ಣ ಕೈಗಾರಿಕೆಗಳು, ಸಾರಿಗೆ, ಉತ್ಪಾದನೆ ವಲಯದಲ್ಲಿ ಹೆಚ್ಚಾಗಿ ಡೀಸೆಲ್ ಅವಲಂಬಿಸಿವೆ. ಡೀಸೆಲ್ ಬೆಲೆ 2 ರೂ ಏಕಾಏಕಿ ತೀವ್ರವಾಗಿ ಏರಿಕೆಯಾಗುತ್ತಿರುವುದರಿಂದ, ವ್ಯವಹಾರಗಳು, ಉತ್ಪಾದನಾ ವೆಚ್ಚವನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿದೆ ಎಂದಿದ್ದಾರೆ.
ಅನೇಕ ಸಣ್ಣ ಉದ್ಯಮಗಳು ಸಣ್ಣ ಪ್ರಮಾಣದ ಲಾಭಾಂಶದಲ್ಲಿ ಕಾರ್ಯನಿರ್ವಹಿಸುತ್ತವೆ. ಹೆಚ್ಚುತ್ತಿರುವ ಇಂಧನ ವೆಚ್ಚಗಳು ಅವುಗಳ ಕಾರ್ಯಸಾಧ್ಯತೆಗೆ ಅಪಾಯವನ್ನುಂಟು ಮಾಡುತ್ತಿವೆ. ವಿದ್ಯುತ್ ಪೂರೈಕೆ ಸರಪಳಿ ಅಡಚಣೆಗಳು, ಹಣದುಬ್ಬರ ಒತ್ತಡಗಳು, ಹೆಚ್ಚುತ್ತಿರುವ ಕಚ್ಚಾವಸ್ತುಗಳ ವೆಚ್ಚಗಳಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ತಿಳಿಸಿದೆ.
ರ್ಕಾರವು ಸಬ್ಸಿಡಿ ಒದಗಿಸಬೇಕು, ಅಬಕಾರಿ ಸುಂಕಗಳನ್ನು ಕಡಿಮೆ ಮಾಡಬೇಕು ಅಥವಾ ಇಂಧನ ಬೆಲೆಗಳ ಪರಿಣಾಮವನ್ನು ಕಡಿಮೆ ಮಾಡುವ ನೀತಿಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.