Saturday, April 5, 2025
Homeರಾಷ್ಟ್ರೀಯ | Nationalವಕ್ಫ್ ಮಸೂದೆ ಅಂಗೀಕಾರವನ್ನು ಸುಪ್ರಿಂನಲ್ಲಿ ಪ್ರಶ್ನಿಸಲು ಮುಂದಾದ ಡಿಎಂಕೆ

ವಕ್ಫ್ ಮಸೂದೆ ಅಂಗೀಕಾರವನ್ನು ಸುಪ್ರಿಂನಲ್ಲಿ ಪ್ರಶ್ನಿಸಲು ಮುಂದಾದ ಡಿಎಂಕೆ

DMK to challenge passage of Waqf Bill in Supreme Court

ಚೆನ್ನೈ,ಏ. 3: ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಮಸೂದೆಯ ವಿರುದ್ಧ ತಮ್ಮ ಪಕ್ಷ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಿದೆ ಎಂದು ಹೇಳಿದ್ದಾರೆ.

ಮಸೂದೆಯ ಅಂಗೀಕಾರದ ವಿರುದ್ಧ ಪ್ರತಿಭಟಿಸಲು ಕಪ್ಪು ಬ್ಯಾಡ್ಜ್ ಧರಿಸಿ ವಿಧಾನಸಭೆಗೆ ಬಂದ ಸಿಎಂ, ಭಾರತದಲ್ಲಿ ಬಹುಮತದ ಪಕ್ಷಗಳ ವಿರೋಧದ ಹೊರತಾಗಿಯೂ ಕೆಲವು ಮಿತ್ರಪಕ್ಷಗಳ ಆಜ್ಞೆಯ ಮೇರೆಗೆ ಮುಂಜಾನೆ 2 ಗಂಟೆಗೆ ತಿದ್ದುಪಡಿಯನ್ನು ಅಂಗೀಕರಿಸುವುದು ಸಂವಿಧಾನದ ರಚನೆಯ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.

ಇದು ಧಾರ್ಮಿಕ ಸಾಮರಸ್ಯವನ್ನು ಕದಡುವ ಕೃತ್ಯವಾಗಿದೆ. ಇದನ್ನು ಎತ್ತಿ ತೋರಿಸಲು, ನಾವು ಇಂದಿನ ವಿಧಾನಸಭಾ ಕಲಾಪಗಳಲ್ಲಿ ಕಪ್ಪು ಬ್ಯಾಡ್ಜ್ ಗಳನ್ನು ಧರಿಸಿ ಭಾಗವಹಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು.

ಈ ವಿವಾದಾತ್ಮಕ ತಿದ್ದುಪಡಿಯ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ವಕ್ಸ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಜನರಿಗೆ ಬೆದರಿಕೆ ಹಾಕುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧ ತಮಿಳುನಾಡು ಹೋರಾಡಲಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News