Saturday, April 5, 2025
Homeರಾಷ್ಟ್ರೀಯ | Nationalವಕ್ಫ್ ಆಸ್ತಿ ಕಬಳಿಸಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ : ಮಲ್ಲಿಕಾರ್ಜುನ ಖರ್ಗೆ

ವಕ್ಫ್ ಆಸ್ತಿ ಕಬಳಿಸಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ : ಮಲ್ಲಿಕಾರ್ಜುನ ಖರ್ಗೆ

'Won't bow down': Kharge asks Anurag Thakur to apologize on land grab charges

ನವದೆಹಲಿ ಏ.3- ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ ಎಂಬ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅವರ ಆರೋಪಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಪುಷ್ಪಾ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಠಾಕೂರ್‌ ಅವರು ಖರ್ಗೆ ಕುಟುಂಬದವರು ವಕ್ಫ್ ಆಸ್ತಿ ಕಬಳಿಸಿದ್ದಾರೆ ಎಂದು ಮಾಡಿದ್ದ ಆರೋಪಕ್ಕೆ ಖರ್ಗೆ ಅವರು ಸಿನಿಮೀಯ ಪ್ರತ್ಯುತ್ತರ ನೀಡಿದ್ದಾರೆ.ಠಾಕೂರ್‌ ಹೇಳಿಕೆಯನ್ನು ಆಧಾರರಹಿತವೆಂದು ತಳ್ಳಿಹಾಕಿದ್ದಲ್ಲದೆ, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ರಾಜಕೀಯ ದಾಳಿಗೆ ತಲೆಬಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು .ನೀವು ನನ್ನನ್ನು ಪ್ರೀತಿಸಿದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ಯಾದ್‌ ರಖೋ, ಮೈ ದಾರಾನೆ ಸೆ ದರ್ನೆ ವಾಲಾ ನಹೀ (ಬಿಜೆಪಿ ನಾಯಕರು ನನ್ನನ್ನು ಹೆದರಿಸಲು ಬಯಸಿದರೆ, ನಾನು ಎಂದಿಗೂ ತಲೆಬಾಗುವುದಿಲ್ಲ ಎಂದು ಗುಡುಗಿದ್ದಾರೆ.

ನೆನಪಿಡಿ, ನಾನು ಬೆದರಿಕೆಗೆ ಹೆದರುವ ವ್ಯಕ್ತಿಯಲ್ಲ. ನನ್ನ ಜೀವನ ಯಾವಾಗಲೂ ತೆರೆದ ಪುಸ್ತಕವಾಗಿದೆ. ನನ್ನ ಜೀವನ ಹೋರಾಟಗಳಿಂದ ತುಂಬಿದೆ ಎಂದಿದ್ದಾರೆ.ಸುಮಾರು 60 ವರ್ಷಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ ನಾನು ಇದಕ್ಕೆ ಅರ್ಹನಲ್ಲ.

ನಿನ್ನೆ ಲೋಕಸಭೆಯಲ್ಲಿ ಅನುರಾಗ್‌ ಠಾಕೂರ್‌ ಅವರು ನನ್ನ ಮೇಲೆ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಹೊರಿಸಿದ್ದರು. ನನ್ನ ಸಹೋದ್ಯೋಗಿಗಳು ಪ್ರಶ್ನಿಸಿದಾಗ, ಅವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕಾಯಿತು. ಆದರೆ ಅವರು ಹಾಗೇ ಮಾಡದಿರುವುದರಿಂದ ನನಗೆ ಹಾನಿಯಾಗಿದೆ ಎಂದು ಅವರು ಹೇಳಿದರು.

ಅನುರಾಗ್‌ ಠಾಕೂರ್‌ ಅವರ ದಾಳಿಯು ತಮ್ಮ ರಾಜಕೀಯ ಜೀವನದ ಮೇಲೆ ಭಾರಿ ಕಳಂಕವನ್ನುಂಟು ಮಾಡಿದೆ ಎಂದು ಖರ್ಗೆ ಹೇಳಿದ್ದಾರೆ ಮತ್ತು ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ತಮ್ಮ ದಾಳಿಯನ್ನು ತೀವ್ರಗೊಳಿಸಿದ ಕಾಂಗ್ರೆಸ್‌‍ ಮುಖ್ಯಸ್ಥರು, ಮಾಜಿ ಕೇಂದ್ರ ಸಚಿವರಿಗೆ ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ ಎಂದು ಹೇಳಿದರು.

ಅವರು ರಾಜೀನಾಮೆ ನೀಡಬೇಕು. ಆದರೆ ಅವರ ಆರೋಪ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ. ವಕ್ಫ್ ಭೂಮಿಯ ಒಂದು ವಿಷಯದಲ್ಲಾದರೂ ನಾನು ಅಥವಾ ನನ್ನ ಮಕ್ಕಳು ಆಕ್ರಮಿಸಿಕೊಂಡಿದ್ದೇವೆ ಎಂದು ಅವರು ಸಾಬೀತುಪಡಿಸಿದರೆ, ನಾನು ರಾಜೀನಾಮೆ ನೀಡುತ್ತೇನೆ. ನಾನು ಈ ವಿಷಯಗಳಿಗೆ ಹೆದರುವುದಿಲ್ಲ. ನಾನು ಒಬ್ಬ ಕಾರ್ಮಿಕನ ಮಗ ಎಂದು ಅವರು ಹೇಳಿದರು.

RELATED ARTICLES

Latest News