Saturday, April 5, 2025
Homeರಾಷ್ಟ್ರೀಯ | Nationalವಕ್ಫ್ ನಿಯಮಗಳನ್ನು ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ವಕ್ಫ್ ನಿಯಮಗಳನ್ನು ರೂಪಿಸಲು ಮುಂದಾದ ಕೇಂದ್ರ ಸರ್ಕಾರ

Central government moves to frame Waqf rules

ನವದೆಹಲಿ,ಏ.4- ಸಂಸತ್‌ನ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕಾರವಾಗಿರುವ ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಶೀಘ್ರದಲ್ಲೇ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ನಿಯಮಗಳನ್ನು ರೂಪಿಸುವಾಗ ವಿಳಂಬವಾಗಿತ್ತು. ಇದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಇದೀಗ ಸಂಸತ್‌ನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿಧೇಯಕ ಅಂಗೀಕೃತವಾಗಿರುವುದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಹಿಗೆ ಕಳುಹಿಸಿಕೊಡಲಾಗುತ್ತದೆ.

ವಿಧೇಯಕವನ್ನು ಕಾನೂನು ತಜ್ಞರಿಗೆ ಪರಿಶೀಲಿಸಲು ಕಳುಹಿಸಿಕೊಡುತ್ತಾರೆ. ಅದಾದ ನಂತರ ಸಹಿ ಹಾಕುತ್ತಾರೆ. ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕಿದ ನಂತರ ವಿಧೇಯಕವು ಕಾನೂನಾಗಿ ಮಾರ್ಪಡಲಿದೆ.

ನಂತರ ಕೇಂದ್ರವು ಈ ವಿಧೇಯಕಕ್ಕೆ ಕಾನೂನಿನ ರೂಪುರೇಷೆಗಳನ್ನು ನೀಡಿದ ಬಳಿಕ ಅಧಿಕೃತವಾಗಿ ದೇಶಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಈ ಪ್ರಕ್ರಿಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಶೀಘ್ರ ಮುಗಿಸಲು ಕಾನೂನು ಇಲಾಖೆ ಮುಂದಾಗಿದೆ.

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದರೆ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರದ ಬಹುದೊಡ್ಡ ಸಾಧನೆ ಇದಾಗಲಿದೆ. ಈ ಹಿಂದೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿ ಹಲವರ ವಿರೋಧದ ನಡುವೆಯೂ ಜಮುಕಾಶೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿತ್ತು.

ಇದರ ಜೊತೆಗೆ ಭಾರತದಲ್ಲಿ ವಾಸಿಸುತ್ತಾ ಪೌರತ್ವ ಪಡೆಯದವರನ್ನು ದೇಶದಿಂದಲೇ ಹೊರದಬ್ಬುವ ಸಿಎಎ ಕಾಯ್ದೆಯನ್ನು ಜಾರಿ ಮಾಡಿತ್ತು. ಮುಸ್ಲಿಂ ಸಮುದಾಯದಲ್ಲಿ ಬೇರು ಬಿಟ್ಟಿದ್ದ ತ್ರಿವಳಿ ತಲಾಖ್‌ಗೂ ಕೋಕ್‌ ನೀಡಲಾಗಿತ್ತು.

ಇದೀಗ ವಕ್‌್ಫ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ವಕ್‌್ಫ ತಿದ್ದುಪಡಿ ಕಾಯ್ದೆ 2024 ಅನ್ನು ಸಂಸತ್‌ನಲ್ಲಿ ಅಂಗೀಕಾರ ಮಾಡಿದೆ. ವಿಧೇಯಕಕ್ಕೆ ನಾವು ಎಷ್ಟು ಸಾಧ್ಯವೋ ಅಷ್ಟು ಬೇಗ ನಿಯಮಗಳನ್ನು ರೂಪಿಸುತ್ತೇವೆ ಎಂದು ಹಿರಿಯ ಸಚಿವರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನಾವು ಬಹುಮತವಿದೆ ಎಂದು ಏಕಪಕ್ಷೀಯವಾಗಿ ಮಸೂದೆಯನ್ನು ಅಂಗೀಕಾರ ಮಾಡಿಲ್ಲ. ಎರಡು ಸದನಗಳಲ್ಲಿ ಸುದೀರ್ಘ ಚರ್ಚೆಗೆ ಸಭಾಪತಿ ಮತ್ತು ಸಭಾಧ್ಯಕ್ಷರು ಅವಕಾಶ ನೀಡಿದ್ದರು. ಎಲ್ಲರೂ ತಮ ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಮತದಾನದ ಮೂಲಕವೇ ವಿಧೇಯಕವನ್ನು ಅಂಗೀಕಾರ ಮಾಡುವ ಮೂಲಕ ಪ್ರಜಾಪ್ರಭುತ್ವ ಮಾರ್ಗದಲ್ಲೇ ನಡೆದುಕೊಂಡಿದ್ದೇವೆ. ಆದಷ್ಟು ಬೇಗ ನಿಯಮಗಳು ಸಿದ್ಧಗೊಳ್ಳಲಿವೆ ಎಂದು ಹೇಳಿದ್ದಾರೆ.

ತೀವ್ರ ಗದ್ದಲ, ಜಟಾಪಟಿ, ಸುದೀರ್ಘ 12 ಗಂಟೆ ಚರ್ಚೆ ನಂತರ ಮಧ್ಯರಾತ್ರಿ ವಕ್‌್ಫ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ ನೀಡಿದೆ. ಮಧ್ಯರಾತ್ರಿ 2:30 ಕ್ಕೆ ನಡೆದ ಮತದಾನದಲ್ಲಿ ಮಸೂದೆ ಪರ 128, ವಿರುದ್ಧ 95 ಮತಗಳು ಬಂದಿವೆ.

ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್‌ ರಿಜಿಜು, ಸದುದ್ದೇಶದಿಂದ ತಂದಿರುವ ಮಸೂದೆಗೆ ಕಾಂಗ್ರೆಸ್‌‍ ಸೇರಿ ವಿಪಕ್ಷಗಳೆಲ್ಲಾ ಬೆಂಬಲ ನೀಡಬೇಕು. ಕಾನೂನುಗಳು ನ್ಯಾಯ ಇರಬೇಕೇ ಹೊರತು ಜಗಳ ಮಾಡಲು ಅಲ್ಲ, ವಕ್‌್ಫ ಕೇವಲ ಮುಸ್ಲಿಮರ ಅಧೀನದಲ್ಲಿರಲಿದೆ. ಬೇರೆಯವರ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.

ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಪುರಸ್ಕರಿಸಿದ್ದೇವೆ. 2013ರಲ್ಲಿ ತಂದ ವಕ್ಫ್ ಮಸೂದೆಯನ್ನು ಎದುರಿಸಲು ರಚಿಸಲಾದ 13 ಸದಸ್ಯರ ಸಮಿತಿಗಿಂತ ಸಮಿತಿಯು 31 ಸದಸ್ಯರನ್ನು ಹೊಂದಿತ್ತು. 2013 ರ ಸಮಿತಿಯ 22 ಸಭೆಗಳಿಗೆ ಹೋಲಿಸಿದರೆ ಜಗದಾಂಬಿಕಾ ಪಾಲ್‌ ನೇತೃತ್ವದ ಜೆಪಿಸಿ 200 ಗಂಟೆಗಳ ಕಾಲ ಚರ್ಚಿಸಿದೆ ಮತ್ತು 36 ಸಭೆಗಳನ್ನು ನಡೆಸಿದೆ ಎಂದು ತಿಳಿಸಿದ್ದರು.

RELATED ARTICLES

Latest News