ಬೆಂಗಳೂರು,ಏ.5- ಶಾಸಕರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆಂಬ ಕಾರಣಕ್ಕಾಗಿ ಬೆಂಗಳೂ ರಿನಲ್ಲಿ ಆತಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣವನ್ನು ಖಂಡಿಸಿ ಬಿಜೆಪಿ ಕುಶಾಲನಗರ ಸೇರಿದಂತೆ ಮಡಿಕೇರಿಯ ಹಲವೆಡೆ ಭಾರೀ ಪ್ರತಿಭಟನೆ ನಡೆಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕ ಪ್ರೀತಂ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಸೇರಿದಂತೆ ಸ್ಥಳೀಯ ಬಿಜೆಪಿಯ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವಗ್ರಾಮವಾದ ಮಡಿಕೇರಿಯ ಕುಶಾಲನಗರಕ್ಕೆ ತೆಗೆದುಕೊಂಡು ಹೋದರು. ಸ್ವಗ್ರಾಮಕ್ಕೆ ಬರುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಾರ್ಯಕರ್ತರು ಆತಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಶಾಸಕರಾ ಪೊನ್ನಣ್ಣ ಹಾಗೂ ಡಾ.ಮಂಥರ್‌ಗೌಡ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಇಬ್ಬರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗುವವರೆಗೂ ಅಂತ್ಯ ಸಂಸ್ಕಾರ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಶಾಸಕರ ನಿರ್ದೇಶನದಂತೆ ವಿನಯ್ ಸೋಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಿದ್ದ ಮಡಿಕೇರಿಯ ಎಸ್‌ಪಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಪಡಿಸಬೇಕೆಂದು ಒತ್ತಾಯಿಸಿದರು.
ಎಫ್‌ಐಆರ್‌ನಲ್ಲಿ ಇಬ್ಬರು ಶಾಸಕರ ಹೆಸರನ್ನು ಸೇರಿಸಲೇಬೇಕು. ನನ್ನ ಆತಹತ್ಯೆಗೆ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್‌ಗೌಡ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾನಿರತರನ್ನು ಪೊಲೀಸರು ತಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ವಗ್ರಾಮಕ್ಕೆ ಮೃತದೇಹವನ್ನು ಕರೆದೊಯ್ಯುವ ಮುನ್ನ ಕುಶಾಲನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಇಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ ಪರಿಣಾಮ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಡೆತ್‌ನೋಟ್‌ನಲ್ಲಿ ನನ್ನ ಆತಹತ್ಯೆಗೆ ಶಾಸಕರ ಕಿರುಕುಳವೇ ಕಾರಣ ಎಂದು ಹೇಳಿದ್ದರೂ ಘಟನೆ ನಡೆದು 24 ಗಂಟೆ ಕಳೆದು ಹೋಗಿದೆ. ಆದರೂ ಈವರೆಗೂ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ.
ಇದರಿಂದಲೇ ಸರ್ಕಾರ ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ. ನಾವು ಸರ್ಕಾರದ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ನ್ಯಾಯ ಸಿಗುವವರೆಗೂ ನಮ ಹೋರಾಟ ಮುಂದುವರೆಯುತ್ತದೆ. ಸರ್ಕಾರ ಬೇಕಾದರೆ ನಮ ವಿರುದ್ಧವೂ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ ಅಷ್ಟೆ. ಯಾವುದೋ ಅಡಬೆ ದುಡ್ಡು ತಂದು ಇಲ್ಲಿ ಎಂಎಲ್‌ಎ ಆಗಿದ್ದೀಯಾ. ನಿನ್ನನ್ನು ಮೂರು ವರ್ಷದ ನಂತರ ಕೊಡಗಿನ ಜನ ಇಲ್ಲಿಂದ ಓಡಿಸುತ್ತಾರೆ. ನಮ ಸಿಟ್ಟು ಹೆಚ್ಚು ಮಾಡಬೇಡಿ ಎಂದು ಗುಡುಗಿದ್ದಾರೆ.
ವಿನಯ್ ಸಾವಿಗೆ ಹಣದ ಕಾರಣ ಎನ್ನುವುದನ್ನು ಬಿಟ್ಟು ಬಿಡಿ. ನಿಮ ಭಿಕ್ಷೆಯ ಹಣ ನಮಗೆ ಬೇಕಿಲ್ಲ. ಪದೇ ಪದೇ ಹಣದ ವಿಚಾರ ಹೇಳಿದರೆ ಸರಿ ಇರಲ್ಲ. ನಿಮಗೆ ಧೈರ್ಯ ಇದ್ದರೆ ವಿನಯ್ ಮನೆಗೆ ಹೋಗಿ ಜನ ಹೂವಿನ ಹಾರ ಹಾಕುತ್ತಾರೋ ಛೀ ಥೂ ಉಗಿಯುತ್ತಾರಾ ನೋಡಿ. ನಿಮಗೆ ಏನೂ ಎರಡು ಕೊಂಬು ಇದ್ದವಾ ಎಂದು ಆಕ್ರೋಶ ಹೊರಹಾಕಿದರು.
ವಿನಯ್ ಸೋಮಯ್ಯ ಸಾಯುವ ಮೊದಲು ಕಳುಹಿಸಿರುವ ವಾಟ್ಸಪ್ ಮೆಸೇಜ್‌ನಲ್ಲಿ ನನ್ನ ಸಾವಿಗೆ ಏನು ಕಾರಣ, ಯಾರ್ಯಾರು ಒತ್ತಡ ಹಾಕಿದ್ದಾರೆ?, ಪೊಲೀಸರಿಂದ ಯಾವ ರೀತಿ ದೌರ್ಜನ್ಯ ಆಯಿತು ಎಲ್ಲವೂ ಇದೆ. ಹರೀಶ್ ಪೂವಯ್ಯ, ತೆನ್ನಿರಾ, ಪೊನ್ನಣ್ಣ ಮಂಥರ್ ಗೌಡ ನಾಲ್ಕು ಜನರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಮಾತ್ರ ತೆನ್ನಿರಾ ಒಬ್ಬರನ್ನು ಸೇರಿಸಿ ಇನ್ನು ಮೂವರ ಹೆಸರನ್ನು ಕೈಬಿಟ್ಟಿದ್ದಾರೆ. ಯಾಕೆ ಎಂದು ಪ್ರಶ್ನಿಸಿದರು.
ಮೂವರ ವಿರುದ್ಧ ದೂರು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ನಿವಾಸಿಯಾದ ವಿನಯ್ ಸೋಮಯ್ಯ ಅವರ ಆತಹತ್ಯೆ ಪ್ರಕರಣ ಸಂಬಂಧ ಇದೀಗ ಮೂವರ ವಿರುದ್ಧ ದೂರು ದಾಖಲಾಗಿದೆ. ಮೂವರ ಕಿರುಕುಳದಿಂದ ಸಹೋದರ ಆತಹತ್ಯೆ ಮಾಡಿಕೊಂಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ವಿನಯ್ ಸೋಮಯ್ಯ ಅವರ ಸಹೋದರ ಜೀವನ್ ಸೋಮಯ್ಯ ಅವರು ದೂರು ನೀಡಿದ್ದರು.
ದೂರಿನನ್ವಯ ಕೊಡಗಿನ ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್‌ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತನ್ನೀರಾ ಮೈನಾ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗೋಣಿಮಾರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡುಂಡಿ ಗ್ರಾಮದ ವಿನಯ್, ದೇವತಿ, ಸೋಮಯ್ಯ ದಂಪತಿಯ 3ನೇ ಪುತ್ರ. 15 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಬೆಂಗಳೂರಿನಲ್ಲಿ ಮ್ಯಾನ್ ಪವರ್ ಆಪರೇಟಿಂಗ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರಾಗಿದ್ದರು. ವಿನಯ್ ಸೋಮಯ್ಯಗೆ ಓರ್ವ ಮಗಳು ಇದ್ದಾಳೆ.
ಕೊಡಗು ಸಮಸ್ಯೆಗಳು ಎನ್ನುವ ವಾಟ್ಸಾಪ್ ಗ್ರೂಪ್ ಅಡಿನ್ ಸಹ ಆಗಿದ್ದು, ಇತ್ತೀಚೆಗೆ ಇದೇ ಗ್ರೂಪ್ ಮೂಲಕ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಆಕ್ಷೇಪಾರ್ಹ ಪೋಸ್ಟ್ ವೈರಲ್ಲಾಗಿತ್ತು. ಈ ಸಂಬಂಧ ಗ್ರೂಪ್ ಅಡಿನಿಯಾಗಿದ್ದ ವಿನಯ್ ವಿರುದ್ಧವೇ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಬಂಧನದ ಬಳಿಕ ಬಹಳ ಮನನೊಂದಿದ್ದ ವಿನಯ್ ಆತಹತ್ಯೆಗೆ ಮಾಡಿಕೊಂಡರು.
ವಿನಯ್ ಸೋಮಯ್ಯ ಮರಣಪತ್ರ ಬರೆದಿಟ್ಟು, ತನ್ನ ವಿರುದ್ಧ ಈ ಹಿಂದೆ ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅದನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದುದರಿಂದ ಮನನೊಂದು ನಾಗವಾರದ ಕಚೇರಿಯಲ್ಲಿಯೇ ಆತಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡ ತನ್ನೀರಾ ಮೈನಾ ಹಾಗೂ ಸಿಎಂ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ಹಾಗೂ ಮಂಥರ್ ಗೌಡ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.