Tuesday, April 8, 2025
Homeಅಂತಾರಾಷ್ಟ್ರೀಯ | Internationalಅಬುಧಾಬಿಯಲ್ಲಿ ರಾಮನವಮಿ ಸಂಭ್ರಮ

ಅಬುಧಾಬಿಯಲ್ಲಿ ರಾಮನವಮಿ ಸಂಭ್ರಮ

Hindu Temple In Abu Dhabi Celebrates Ram Navami With Grand Celebration

ಅಬುಧಾಬಿ,ಏ.7- ಇಲ್ಲಿನ ವಿಶ್ವ ಪ್ರಸಿದ್ಧ ಬಿಎಪಿಎಸ್‌‍ ಹಿಂದೂ ದೇವಾಲಯದಲ್ಲಿ ರಾಮನವಮಿಯನ್ನು ಭವ್ಯವಾಗಿ ಆಚರಿಸಲಾಗಿದೆ.ರಾಮನವಮಿಯ ಭಕ್ತಿ ಮತ್ತು ಸಾಂಸ್ಕೃ ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಈ ಪ್ರದೇಶದಾದ್ಯಂತದ ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು.

ಅಬುಧಾಬಿಯಲ್ಲಿ ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಿದ
ಹಿಂದೂ ದೇವಾಲಯದಲ್ಲಿ ರಾಮ ಭಜನೆಗಳೊಂದಿಗೆ ಪ್ರಾರಂಭಿಸಿ ಇಡೀ ದಿನದ ಆಚರಣೆಗಳನ್ನು ಆಯೋಜಿಸಲಾಯಿತು.

ಇದು ಯುನೈಟೆಡ್‌ ಅರಬ್‌ ಎಮಿರೇಟ್ಸ್ (ಯುಎಇ) ನಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಾಮರಸ್ಯದ ಹೆಗ್ಗುರುತನ್ನು ಸೂಚಿಸುತ್ತದೆ.ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಭಾಗವಹಿಸಲು ಈ ಪ್ರದೇಶದಾದ್ಯಂತದ ಭಕ್ತರು ದೇವಾಲಯದಲ್ಲಿ ಜಮಾಯಿಸಿದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ದೇವಾಲಯದ ಪ್ರಧಾನ ಅರ್ಚಕ ಪೂಜ್ಯ ಬ್ರಹ್ಮವಿಹಾರಿ ಸ್ವಾಮಿ ಅವರ ಪ್ರಕಾರ, ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ರಾಮ ಭಜನೆಯೊಂದಿಗೆ ಪ್ರಾರಂಭಿಸಿ, ಮಧ್ಯಾಹ್ನ 12 ಗಂಟೆಗೆ ಶ್ರೀ ರಾಮ್‌ ಜನ್ಮೋತ್ಸವ ಆರತಿಯೊಂದಿಗೆ ಪೂರ್ಣ ದಿನದ ಆಚರಣೆಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದರು ಎಂದಿದ್ದಾರೆ.

RELATED ARTICLES

Latest News