ಬೆಂಗಳೂರು,ಏ.8– ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಪಾಪರ್ ಆಗಿದ್ದು ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂಬಳ ಕೊಡಲು ಇವರಿಗೆ ಯೋಗ್ಯತೆ ಇಲ್ಲ. ನೀವು ಪಾಪರ್ ಆಗಿಲ್ಲ ಅಂದರೆ 15000 ಸಾವಿರ ಕೋಟಿ ಸಾಲ ಯಾಕೆ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಸಾಲ ಮಾಡುವದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರಿಗೆ ಎರಡು ತಿಂಗಳಿಗೊಮೆ ಸಂಬಳ ಕೊಡುತ್ತಿದ್ದಾರೆ. ಸರ್ಕಾರ ಹೇಗೆ ನಡೆಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಬಂದಮೇಲಂತೂ ಅಬಕಾರಿ ಇಲಾಖೆ ಲೂಟಿ ಮಾಡುವ ಇಲಾಖೆ ಆಗಿದೆ. ವೈನ್ ಸ್ಟೋರ್ ಅಲಾಟೆಂಟ್ ಮಾಡುವುದರಲ್ಲೇ ಕೋಟಿ ರೂ ನುಂಗುತ್ತಿದ್ದಾರೆ. ವೈನ್‌ಸ್ಟೋರ್‌ಗೆ ಇಷ್ಟು ದುಡ್ಡು ಕೊಡ್ಬೇಕು ಎಂದು ಬಹಿರಂಗವಾಗಿ ಹರಾಜ್ ಹಾಕುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಬಯಲಿಗೆ ಬರಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದ ದಿನನಿತ್ಯ ಬೆಲೆ ಏರಿಕೆ ರಗಳೆ.. ಬಿಜೆಪಿ 40%ಹಣ ಲೂಟಿ ಮಾಡುತ್ತಿದ್ದಾರೆ.. ಯಾವುದೇ ತೆರಿಗೆ ಹಾಕದೇ ಗ್ಯಾರಂಟಿಗಳನ್ನು ಕೊಟ್ಟು ಕರ್ನಾಟಕವನ್ನ ದೇವಲೋಕ ಮಾಡುತ್ತೇವೆ ಅಂದಿದ್ರು. ಈಗ ಐದು ಗ್ಯಾರಂಟಿಗೆ ಎಷ್ಟು ಬೇಕು ಅಷ್ಟು ತೆರಿಗೆ ಹಾಕಿದ್ದಾರೆ.
ಬೆಲೆ ಏರಿಕೆಯ ತಾಳಲು ಆಗುತ್ತಿಲ್ಲ . ಅದಕ್ಕೆ 2 ಸಾವಿರ ಕೊಟ್ಟು ಜನರಿಗೆ ಸಮಾಧಾನ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಬೆಲೆ ಏರಿಕೆ ಮಾಡಿ ಇಲ್ಲಿ ಎರಡು ಸಾವಿರ ಕೊಡುವುದು ಮೋಸ. ಕಾಂಗ್ರೆಸ್ ರಾಜ್ಯದ ಜನರ ಜೇಬನ್ನೇ ದರೋಡೆ ಮಾಡುತ್ತಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆ ಬಂದ ಒಂದೇ ವರ್ಷಕ್ಕೆ ವಿರೋಧಿ ಅಲೆ ಬಂದಿದೆ. ಚುನಾವಣೆ ಬಂದಾಗ ಕಾಂಗ್ರೆಸ್ ವಿರೋಧ ಅಲೆ ಬರುತ್ತದೆ ಎಂದರು.
ಮೈಸೂರಿನಲ್ಲಿ ಜನಾಕ್ರೋಶ ಯಶಸ್ವಿಯಾಗಿದೆ. ಒಬ್ಬರಿಗೆ ಕೆಪಿಸಿಸಿ ಕುರ್ಚಿ ಉಳಿಸಿಕೊಳ್ಳುವ ಯೋಜನೆ. ಮತ್ತೊಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಚಿಂತೆಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿದೆ ಇದು ಹೊರೆಯಾಗುವುದಿಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ. ನಮಗೆ ಹೇಳಲು ಬರಬೇಡಿ ಎಂದು ತಿರುಗೇಟು ನೀಡಿದರು.
ಹಳೇ ಸಿದ್ದರಾಮಯ್ಯಗೂ ಹೊಸ ಸಿದ್ದರಾಮಯ್ಯರಿಗೂ ಬಹಳ ವ್ಯತ್ಯಾಸ ಇದೆ. ಸಿದ್ದರಾಮಯ್ಯನವರಿಗೆ ಮರೆವು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಯಾಕೆ ನಮಗೆ ಕಪಾಳಮೋಕ್ಷ ಮಾಡುತ್ತದೆ. ಸಂಸದರು ಆಯ್ಕೆ ಆಗಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್‌ನಲ್ಲಿ ಸಮನ್ವಯ ಸಮಿತಿ ರಚನೆ ಮಾಡುವ ಬಗ್ಗೆ ಕುಮಾರಸ್ಬಾಮಿ ಅವರ ಜೊತೆ ಮಾತನಾಡಿದ್ದೇನೆ. ಅಧಿವೇಶನದ ಒಳಗಡೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಜೆಡಿಎಸ್ ಶಾಸಕ ಜೊತೆ ಚರ್ಚೆ ಮಾಡಿದ್ದೇವೆ. ಅವರ ಹೋರಾಟ ಅವರು ಮಾಡುತ್ತಾರೆ. ನಮ ಹೋರಾಟ ನಾವು ಮಾಡುತ್ತಿದ್ದೇವೆ ಎದು ಹೇಳಿದರು.