ಬೆಂಗಳೂರು, ಏ.8– ಹಾಲು, ಕರೆಂಟ್ ಮತ್ತಿತರ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸರ್ಕಾರ ಇತ್ತ ಮನೆ, ಹೋಟೆಲ್, ಲಾಡ್ಜ್ ಸೇರಿದಂತೆ ಕಮರ್ಷಿಯಲ್ ಕಟ್ಟಡಗಳಲ್ಲಿ ಉತ್ಪಾದನೆ ಆಗುವ ಕಸಕ್ಕೂ ಶುಲ್ಕ ವಿಧಿಸಿ ಜನರ ಮೇಲೆ ತೆರಿಗೆ ಹೇರಿದೆ.
ಗ್ಯಾರಂಟಿ ಯೋಜನೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಯೋಜನೆಗೆ ಹಣ ಸರಿದೂಗಿಸಲು ಕಸಕ್ಕೂ ಶುಲ್ಕ ಹಾಕಿದೆ. ಮನೆ. ಹೋಟೆಲ್, ಲಾಡ್ಜ್ , ಕಮರ್ಷಿಯಲ್ ಕಟ್ಟಡಗಳಲ್ಲಿ ಉತ್ಪಾದನೆ ಹಾಗುವ ಕಸಕ್ಕೂ ಜನ ತೆರಿಗೆ ಪಾವತಿಸು ವಂತಾಗಿದೆ.
ಹೀಗಾಗಿ ಈ ವರ್ಷದಿಂದ ಪಾವತಿಸುವ ಆಸ್ತಿ ತೆರಿಗೆಯಲ್ಲೇ ಕಸದ ಸೆಸ್ ಮತ್ತು ಶುಲ್ಕ ತುಂಬಬೇಕಿರುವುದರಿಂದ ಇದುವರೆಗೂ ಪಾವತಿಸುತ್ತಿದ್ದ ತೆರಿಗೆಗಿಂತ ಶೇ.20 ರಷ್ಟು ಹಣ ಪಾವತಿಸಲು ಎಲ್ಲರೂ ರೆಡಿಯಾಗಬೇಕಿದೆ.ವಸತಿ ಕಟ್ಟಡಗಳ 600 ಚದರ ಅಡಿಗೆ 10ರೂ, 6001 ಚ, ಅಡಿಯಿಂದ 1000 ಚ.ಅಡಿಗೆ- 50 ರೂ,1001 ಚ, ಅಡಿಯಿಂದ 2000 ಚ.ಅಡಿಗೆ- 100, 2001 ಚ, ಅಡಿಯಿಂದ 3000 ಚ.ಅಡಿಗೆ- 150, 3001 ಚ, ಅಡಿಯಿಂದ 4000 ಚ. ಅಡಿಗೆ- 200, 4001 ಚ, ಅಡಿಗಳಿಗೂ ಮೇಲ್ಪಟ್ಟ ಕಟ್ಟಡಗಳಿಗೆ ಪ್ರತಿ ತಿಂಗಳೂ 400 ರೂ. ಕಸದ ತೆರಿಗೆ ಪಾವತಿಸಬೇಕಿದೆ.
ಕಮರ್ಷಿಯಲ್ ಉಪಯೋಗದ ಕಟ್ಟಡಕ್ಕೆ ಎಷ್ಟು ಅಂತ ನೋಡೋದಾದ್ರೆ..- 1000 ಚ, ಅಡಿಗಳವರೆಗೆ 2000 ರೂ., 1001 ಚ, ಅಡಿಯಿಂದ 2000 ಚ. ಅಡಿಗೆ-6000 ರೂ, 2001 ಚ, ಅಡಿಯಿಂದ 5000 ಚ. ಅಡಿಗೆ-14000 ರೂ, 5001 ಚ, ಅಡಿಯಿಂದ 10000 ಚ. ಅಡಿಗೆ-38 ಸಾವಿರ, 10001 ಚ, ಅಡಿಯಿಂದ 20000 ಚ. ಅಡಿಗೆ-70 ಸಾವಿರ, 20001 ಚ.ಅಡಿಗಳಿಂದ 50000 ಚ,ಅಡಿಗೆ ಒಂದೂವರೆ ಲಕ್ಷ, 50001 ಚ.ಅಡಿಯಿಂದ 100000 ಚ.ಅಡಿಗೆ 2,75,000,00- 100001 ಚ.ಅಡಿಯಿಂದ 200000 ಚ.ಅಡಿಗೆ 5 ಲಕ್ಷ, 200001 ಚ,ಅಡಿಯಿಂದ 500000 ಚ.ಅಡಿಗೆ 13 ಲಕ್ಷ- 500000 ಚ,ಅಡಿಯಿಂದ ಮೇಲ್ಪಟ್ಟ ಕಟ್ಟಡಗಳಿಗೆ 35 ಲಕ್ಷ ಕಸದ ಶುಲ್ಕ ಪಾವತಿಸುವಂತಾಗಿದೆ.
ಇನ್ನೂ ಹೋಟೆಲ್ ಲಾಡ್‌್ಜಗಳಿಗೆ 1000 ಚ, ಅಡಿಗೆ 4000, 1001 ಚ.ಅಡಿಗಳಿಂದ ,2000 ಚ, ಅಡಿಗೆ 12 ಸಾವಿರ, 2001ಚ.ಅಡಿಗಳಿಂದ ,5000ಚ, ಅಡಿಗೆ 28 ಸಾವಿರ, 5001 ಚ.ಅಡಿಯಿಂದ 10000ಚ, ಅಡಿಗೆ 76 ಸಾವಿರ, 10001 ಚ.ಅಡಿಯಿಂದ ,20000ಚ, ಅಡಿಗೆ 1 ಲಕ್ಷದ 40 ಸಾವಿರ, 20001 ಚ.ಅಡಿಯಿಂದ ,500001 ಚ, ಅಡಿಗೆ 3 ಲಕ್ಷ, 50001 ಚ.ಅಡಿಯಿಂದ ,100000 ಚ, ಅಡಿಗೆ 5.50 ಲಕ್ಷ, 100001 ಚ.ಅಡಿಯಿಂದ ,200000 ಚ, ಅಡಿಗೆ 10 ಲಕ್ಷ, 200001 ಚ.ಅಡಿಯಿಂದ 500000 ಚ.ಅಡಿಗೆ 26 ಲಕ್ಷ, 500000 ಮೇಲ್ಪಟ್ಟ ಕಟ್ಟಡಗಳಿಗೆ 70 ಲಕ್ಷ ರೂ. ತೆರಬೇಕಿದೆ.
ಇನ್ನೂ ಸ್ಟಾರ್ ಹೋಟೆಲ್‌ಗಳಿಗೆ 1000 ಚ.ಅಡಿ 95 ಸಾವಿರ, 1001 ಚ.ಅಡಿಯಿಂದ 20000 ಚ,ಅಡಿಗೆ 1 ಲಕ್ಷದ 75 ಸಾವಿರ, 20001 ಚ.ಅಡಿಗಳಿಂದ 50000 ಚ.ಅಡಿಗೆ 3. 75 ಲಕ್ಷ, 50001 ಚ.ಅಡಿಯಿಂದ 100000 ಚ.ಅಡಿಗೆ 6.87.500, 100001 ಚ.ಅಡಿಗಳಿಂದ 200000 ಚ.ಅಡಿಗೆ 12. 50 ಲಕ್ಷ, 200001 ಚ.ಅಡಿಗಳಿಂದ 500000 ಚ.ಅಡಿಗೆ 32 ಲಕ್ಷ 50 ಸಾವಿರ- 500000 ಮೇಲ್ಪಟ್ಟವರು 87,50 ಲಕ್ಷ ಕಟ್ಟಬೇಕಿದೆ.ಒಟ್ಟಾರೆ, ಈ ಬಾರಿ ಆಸ್ತಿ ತೆರಿಗೆ ಪಾವತಿಸುವವರು ಈ ಹಿಂದೆ ಪಾವತಿಸುತ್ತಿದ್ದ ತೆರಿಗೆಗಿಂತ ಶೇ.20 ರಷ್ಟು ಹೆಚ್ಚುವರಿ ಹಣ ಕಟ್ಟಬೇಕಿದೆ.