ಥಾಣೆ, ಏ.9-ಮರಾಠಿಯಲ್ಲಿ ಮಾತನಾಡುವ ಬದಲು ಎಕ್ಸ್ ಕ್ಯೂಸ್ ಮೀ ಎಂದು ಹೇಳಿದ್ದಕ್ಕೆ ಇಬ್ಬರು ಮಹಿಳೆಯರನ್ನು ಥಳಿಸಿದ ಘಟನೆ ಥಾಣೆ ಜಿಲ್ಲೆಯ ಡೊಂಬಿವಿಲಿಯಲ್ಲಿ ನಡೆದಿದೆ. ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆ, ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ಎಂದು ತಿಳಿದುಬಂಇದೆ. ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯರು ತಾವು ವಾಸಿಸುತ್ತಿದ್ದ ಹೌಸಿಂಗ್ ಸೊಸೈಟಿಯ ಆವರಣವನ್ನು ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಪ್ರವೇಶದ್ವಾರಕ್ಕೆ ಅಡ್ಡಿಪಡಿಸುತ್ತಿದ್ದ ಯುವಕನಿಗೆ ಎಕ್ಸ್ ಕ್ಯೂಸ್ ಮೀ ಎಂದು ಹೇಳಿದಾಗ, ಅವನು ಕೋಪಗೊಂಡು, ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದನು ಎಂದು ಅವರು ಹೇಳಿದ್ದಾರೆ.
ಅದೇ ಕಟ್ಟಡದ ನೆಲಮಹಡಿಯಲ್ಲಿ ವಾಸಿಸುವ ವ್ಯಕ್ತಿ ಹಿಂಬದಿ ಸವಾರನ ತೋಳನ್ನು ತಿರುಚಿದ್ದಾನೆ ಎಂದು ವಿಷ್ಣುನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಿದ್ದಾರೆ.ಅವರ ಕುಟುಂಬದ ನಾಲ್ಕು ಅಥವಾ ಐದು ಮಹಿಳೆಯರು ಮತ್ತು ಇಬ್ಬರು ಯುವಕರು ಒಟ್ಟುಗೂಡಿದರು ಮತ್ತು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂಬತ್ತು ತಿಂಗಳ ಮಗುವಿನ ಬಗ್ಗೆ ಅವರು ಯಾವುದೇ ಕಾಳಜಿಯನ್ನು ತೋರಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.