ಬೆಂಗಳೂರು,ಏ.9- ನಗರದ ರೆವಿನ್ಯೂ ನಿವೇಶನದಾರರಿಗೆ ಗುಡ್ ನ್ಯೂಸ್. ಇನ್ನು ಮುಂದೆ ರೆವಿನ್ಯೂ ಸ್ವತ್ತುಗಳಿಗೂ ದೊರೆಯಲಿದೆ ನಕ್ಷೆ ಮಂಜೂರಾತಿ ಭಾಗ್ಯ.ಬಿಬಿಎಂಪಿ ಬೊಕ್ಕಸಕ್ಕೆ ಬಂಪರ್ ಆದಾಯ ನಿರೀಕ್ಷೆ ಮಾಡಿರುವ ಸರ್ಕಾರ ಪಾಲಿಕೆ ವ್ಯಾಪ್ತಿಯ ರೆವಿನ್ಯೂ ನಿವೇಶನದಾರರಿಗೂ ನಕ್ಷೆ ಮಂಜೂರಾತಿಗೆ ಸಮತಿಸಿದೆ.
ಹೀಗಾಗಿ ಬಿಬಿಎಂಪಿ ಬೊಕ್ಕಸಕ್ಕೆ ಹರಿದು ಬರಲಿದೆ ಸಾವಿರಾರು ಕೋಟಿ ಆದಾಯ. ಸಾರ್ವಜನಿಕರ ಹಿತದೃಷ್ಟಿಯಿಂದ ಸುತ್ತೋಲೆ ಪ್ರಕಟ ಮಾಡಲಾ ಗಿದ್ದು, ಏಕನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿ ಅಧಿಕಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಈ ಹಿಂದೆ ಇದ್ದ ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಅಧಿಕಾರ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿದೆ. ಇನುಂದೆ ಬಿಬಿಎಂಪಿ ನಗರ ಯೊಜನೆಗೆಗೆ ಅಧಿಕಾರಿಗಳೇ ಬಿ ಖಾತಾಗಳ ನಿವೇಶನಗಳಿಗೂ ನಕ್ಷೆ ಮಂಜೂರಾತಿ ಮಾಡಿಕೊಡಲಿದ್ದಾರೆ.
ಬಿಬಿಎಂಪಿ ನಗರ ಯೋಜನೆ ವಿಭಾಗದ ಆಯ ವಲಯಗಳ ಎಡಿಟಿಪಿಗಳಿಗೆ ಭೂ ಪರಿವರ್ತನೆ ಮಾಡಿ ನಕ್ಷೆ ಮಂಜೂರಾತಿ ನೀಡುವ ಅವಕಾಶ ಕಲ್ಪಿಸಿಕೊಡಲಾಗಿದೆ.ಸರ್ಕಾರದ ಈ ನಿರ್ಧಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರೆವಿನ್ಯೂ ನಿವೇಶನದಾರರಿಗೆ ಅನುಕೂಲವಾಗುವುದರ ಜೊತೆಗೆ ಪಾಲಿಕೆ ಬೊಕ್ಕಸಕ್ಕೂ ಬಂಪರ್ ಆದಾಯದ ನಿರೀಕ್ಷೆ ಮಾಡಲಾಗಿದೆ.