Saturday, April 19, 2025
Homeರಾಷ್ಟ್ರೀಯ | Nationalರಾಣಾಗೆ ಲಷ್ಕರ್ ನಂಟು ಖಚಿತ

ರಾಣಾಗೆ ಲಷ್ಕರ್ ನಂಟು ಖಚಿತ

National Investigation

ನವದೆಹಲಿ,ಏ.12- ಮುಂಬೈ ಮೇಲಿನ ದಾಳಿಯ ರೂವಾರಿ ತಹವೂರ್ ಹುಸೇನ್ ರಾಣಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲರ್ಷ್ಯ-ಇ-ತೊಯ್ದಾದ ಜೊತೆ ಸಂಪರ್ಕ ಇರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಚಾರಣೆಯ ವೇಳೆ ಪತ್ತೆ ಮಾಡಿದೆ.

ನ್ಯಾಯಾಲಯದ ಆದೇಶದಂತೆ ಪ್ರಸ್ತುತ ಎನ್‌ಐಎ ವಶದಲ್ಲಿರುವ ರಾಣಾನನ್ನು ವಿಚಾರಣೆ ಅಧಿಕಾರಿಗಳು ಲಷ್ಕರ್ ಜೊತೆಗಿನ ರಾಣಾಗಿದ್ದ ನಂಟು, ಡೇವಿಡ್ ಜೆಡ್ಲಿಗೂ ರಾಕಾಗೂ ಇದ್ದ ಸಂಬಂಧ. ಪಾಕ್ ಐಎಸ್‌ಐ ಜೊತೆಗೆ ಅವರಿಗಿದ್ದ ನಂಟು, ದಾಳಿಯಲ್ಲಿ ಇವರ ನಿಖರ ಪಾತ್ರ ಸೇರಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಭಾರತದಲ್ಲಿ ಡೇವಿಡ್ ಹೆಡ್ಲಿಗೆ ಯಾರೆಲ್ಲಾ ಸಹಾಯ ಮಾಡಿದರು. ಆತನಿಗೆ ಹಣದ ನೆರವು ನೀಡಿದವರು ಯಾರು? ಕ್ರಿಕೆಟ್ ಪಂದ್ಯ ವೀಕ್ಷಿಸುವ ನೆಪದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಲರ್ಷ್ಯ-ಇ-ತೊಯ್ದಾ ಉಗ್ರ ಸಾಜಿದ್ ಮಿರ್ ಕುರಿತಂತೆಯೂ ರಾಣಾಗೆ ಪ್ರಶ್ನೆಗಳನ್ನು ಕೇಳಲಾಗಿದೆ.

ಆತ ಬೆಳೆದು ಬಂದ ಹಾದಿ, ಪಾಲನೆ, ಶಿಕ್ಷಣ, ಕುಟುಂಬ, ಪ್ರತಿ ಜೀವನ, ಭಯೋತ್ಪಾದಕನಾಗಿ ಪರಿವರ್ತನೆಗೊಂಡದ್ದು ಹಾಗೂ ಭಯೋತ್ಪಾದಕನಾಗಿ ಬದಲಾದ ವಿಚಾರ ಕುಟುಂಬಕ್ಕೆ ತಿಳಿದಿದೆಯೇ ಎಂಬುದೂ ಸೇರಿದಂತೆ ಹಲವು R

ವಿಚಾರಗಳನ್ನು ಕೆದಕಿದ್ದಾರೆ.

ಮುಂದಿನ ವಿಚಾರಣೆಯ ಸಮಯದಲ್ಲಿ, ರಾಣಾ ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ದನ್ನು ಯಾವಾಗ ಭೇಟಿಯಾದ ಆತನೊಂದಿಗಿನ ಸಂಬಂಧ ಹಾಗೂ ಐಸಿಸ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿರುವುದರ ಕುರಿತು ವಿಚಾರಣೆ

ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿದೆ.

ಎನ್‌ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ.

ದಿನದ 24 ಗಂಟೆಯೂ ಅಧಿಕಾರಿಗಳು ನಿಗಾವಹಿಸಿದ್ದಾರೆ. ಉಗ್ರ ರಾಣಾ ವಿಚಾರಣೆ ಹಿನ್ನೆಲೆಯಲ್ಲಿ ಎನ್‌ಐಎ ಪ್ರಧಾನ ಕಚೇರ ಸುತ್ತಲೂ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಎನ್ಐಎ ಕಚೇರಿ ಇದೀಗ ಭದ್ರಕೋಟೆಯಾಗಿ ಬದಲಾಗಿದೆ. ತಹವೂ‌ರ್ ರಾಣಾ ಇರುವ ಸೆಲ್ 14714 ವಿಸ್ತೀರ್ಣದ್ದಾಗಿದೆ ಹಾಗೂ ಸಿಸಿಟಿವಿ ಕ್ಯಾಮೆರಾ ಕಣ್ಣಾವಲಿನ ಜೊತೆಗೆ ಭದ್ರತಾ ಸಿಬ್ಬಂದಿಯ ಬಿಗಿ ಕಾವಲಿದೆ. ಅಲ್ಲದೇ ಈ ಕೊಠಡಿಯೊಳಗೆ ಎನ್‌ಐಎನ ಉನ್ನತ ಶ್ರೇಣಿಯ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ದೆಹಲಿ ನ್ಯಾಯಾಲಯ ನೀಡಿರುವ 18 ದಿನಗಳ ಕಸ್ಟಡಿ ಅವಧಿ ಮುಗಿಯುವ ತನಕ ರಾಣಾ ಇದೇ ಸೆಲ್ನಲ್ಲಿ ಇರಲಿದ್ದಾನೆ.

ಆತನಿಗೆ ಆಹಾರ ಮತ್ತು ಮೂಲಭೂತ ಅಗತ್ಯಗಳನ್ನು ಸೆಲ್ಲೊಳಗೇ ಪೂರೈಸಲಾಗುತ್ತಿದೆ. ಇನ್ನು ಎನ್‌ಐಎ ಆವರಣದೊಳಗೆ ಆತನ ಚಲನವಲನಗಳು ಕಡಿಮೆ ಇರಲಿದೆ. ಎಲ್ಲಾ ವಿಚಾರಣೆಗಳು 3ನೇ ಮಹಡಿಯಲ್ಲಿರುವ ನೆನ್ನ ಪಕ್ಕದ ಕೋಣೆಯಲ್ಲಿ ನಡೆದಿದೆ. ಅಲ್ಲಿ 2 ಕ್ಯಾಮೆರಾಗಳು ವಿಚಾರಣೆಯನ್ನು ಚಿತ್ರೀಕರಿಸಲಿದೆ. ವಿಚಾರಣೆ ಮುಗಿದ ಬಳಿಕ ನೆಲಮಹಡಿಯ ಸೆಲ್ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿದೆ.

ಅಧಿಕಾರಿಗಳು ಉಗ್ರ ರಾಣಾನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ವಿಚಾರಣೆಗೆ ಸಹಕರಿಸದೆ, ಸೂಕ್ತ ಉತ್ತರ ನೀಡುತ್ತಿಲ್ಲ ಎನ್ನಲಾಗಿದ್ದು, ಕೇವಲ 3 ಗಂಟೆಗಳ ಕಾಲವಷ್ಟೇ ವಿಚಾರಣೆ ನಡೆಸಲಾಗಿದೆ.

ರಾಣಾ 2008ರಲ್ಲಿ 26/11 ದಾಳಿಗೆ ಮುನ್ನ ಮುಂಬೈ ಮಾತ್ರವಲ್ಲ, ಕೇರಳದ ಕೊಚ್ಚಿ ಹಾಗೂ ತಾಜ್ ಮಹಲ್ ಇರುವ ಆಗ್ರಾಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿತ್ತು. ಹೀಗಾಗಿ ಇಲ್ಲಿ ಕೂಡ ರಾಣಾ ದಾಳಿಗೆ ಸಂಚು ರೂಪಿಸಿದ್ದನೇ ಎಂಬುದು ಈಗ ವಿಚಾರಣೆ ವೇಳೆ ದೃಢಪಡುವ ಸಾಧ್ಯತೆ ಇದೆ.

RELATED ARTICLES

Latest News