ನಿತ್ಯ ನೀತಿ
ನಿರ್ಲಕ್ಷ್ಯ ಮತ್ತು ನಿರಾಕರಣೆಗೆ ವ್ಯತ್ಯಾಸವಿದೆ. ನಿರಾಕರಣೆ ನೇರವಾಗಿ ನಿರ್ಧಾರವನ್ನು ತಿಳಿಸುತ್ತದೆ. ನಿರ್ಲಕ್ಷ್ಯ ನಿಧಾನವಾಗಿ ನಿರ್ಧಾರವನ್ನು ತಿಳಿಸುತ್ತದೆ.
ಬುಧವಾರ ಪಂಚಾಂಗ
ವಿಶ್ವಾವಸುನಾಮಸಂವತ್ಸರ
ಆಯನ: ಉತ್ತರಾಯಣ
ಋತು: ಸೌರ ವಸಂತ
ಮಾಸ:ಚೈತ್ರ
ಪಕ್ಷ:ಕೃಷ್ಣ
ತಿಥಿ: ತೃತೀಯಾ
ನಕ್ಷತ್ರ: ಅನುರಾಧಾ
ಯೋಗ: ವ್ಯತೀಪಾತ
ಕರಣ: ಭವ
ಸೂರ್ಯೋದಯ
ಬೆ.06.07
ಸೂರ್ಯಾಸ್ತ
06.33
ರಾಹುಕಾಲ
12.00-1.30
ಯಮಗಂಡ ಕಾಲ
7.30-9.00
ಗುಳಿಕ ಕಾಲ
10.30-12.00
ಇಂದಿನ ಭವಿಷ್ಯ
ಮೇಷ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಬಹಳ ಉತ್ತಮವಾದ ದಿನ. ದೂರ ಪ್ರಯಾಣ ಮಾಡುವಿರಿ.
ವೃಷಭ: ನೀವು ಕಂಡ ಕನಸುಗಳಿಗೆ ಹಿರಿಯರು, ಹಿತೈಷಿಗಳ ಬೆಂಬಲ ಸಿಗಲಿದೆ.
ಮಿಥುನ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ಕಟಕ: ಮಾತಿನಲ್ಲಿ ಹಿಡಿತ ವಿರಲಿ. ಕ್ರಮಕ್ಕೆ ತಕ್ಕ ಫಲ ದೊರೆಯುವುದು. ಉದ್ಯೋಗ ದಲ್ಲಿ ಅಧಿಕ ಒತ್ತಡ,
ಸಿಂಹ: ಆಸ್ತಿ ವಿಚಾರದಲ್ಲಿ ಕಲಹ. ಸಹೋದರತ್ವದಲ್ಲಿ ದ್ವೇಷ ಉಂಟಾಗಲಿದೆ.
ಕನ್ಯಾ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ತುಲಾ: ಅನವಶ್ಯಕ ವಾದ-ವಿವಾದಗಳಿಗೆ ಸಿಲುಕಿ ತೊಂದರೆ ಅನುಭವಿಸುವಿರಿ.
ವೃಶ್ಚಿಕ: ಉತ್ತಮ ಆರೋಗ್ಯ, ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.
ಧನುಸ್ಸು: ಬಟ್ಟೆ ವ್ಯಾಪಾರದಲ್ಲಿ ನಷ್ಟ, ಮಾತಿನಲ್ಲಿ ಹಿಡಿತವಿರಲಿ, ಸ್ವಜನರಿಂದ ತೊಂದರೆ.
ಮಕರ: ಸ್ನೇಹಿತರಿಗೆ ಸಹಕಾರ, ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗಸ್ಥರಿಗೆ ಶುಭ.
ಕುಂಭ: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ.
ಮೀನ: ದಾಂಪತ್ಯ ಜೀವನದಲ್ಲಿ ಕಲಹ, ಗೊಂದಲದ ವಾತಾವರಣ ನಿರ್ಮಾಣವಾಗಬಹುದು.