ನವದೆಹಲಿ,ಸೆ.27- ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧಕ್ಕೆ ಕಾರಣ ಎನ್ನಲಾದ ಖಲಿಸ್ತಾನ ಪರ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕಿಸ್ತಾನದ ಗುಪ್ತಚರ ಐಎಸ್‍ಐ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಉಭಯ ರಾಷ್ಟ್ರಗಳ ನಡುವೆ ಸಂಬಂಧವನ್ನು ಹಾಳು ಮಾಡುವ ಏಕೈಕ ಕಾರಣಕ್ಕಾಗಿಯೇ ಕೆನಡಾದಲ್ಲಿದ್ದ ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‍ನನ್ನು ಪಾಕ್‍ನ ಗುಪ್ತಚರದ ಐಎಸ್‍ನವರೇ ಹತ್ಯೆ ಮಾಡಿರಬಹುದು ಎಂದು ಕೇಂದ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದೆ.
ಹಿಂಬಾಗಿಲ ಮೂಲಕ ಭಾರತಕ್ಕೆ ಕೆಟ್ಟ ಹೆಸರು ತರಲು ಹವಣಿಸಿರುವ ಪಾಕಿಸ್ತಾನ ಐಎಸ್‍ಐ ಏಜೆಂಟರ ಮೂಲಕವೇ ನಿಜ್ಜರ್‍ನನ್ನು ಹತ್ಯೆ ಮಾಡಿರಬಹುದು ಎಂದು ಹೇಳಿದೆ.
ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ನಿಜ್ಜರ್‍ನನ್ನು ಹತ್ಯೆಗೈಯ್ದಿರುವ ಪ್ರಕರಣದಲ್ಲಿ ಐಎಸ್‍ಐ ಕೈವಾಡವನ್ನು ತಳ್ಳಿಹಾಕುವಂತಿಲ್ಲ. ಕೆನಡಾ ಮತ್ತು ಭಾರತದ ನಡುವೆ ಸಂಬಂಧವನ್ನು ಹಾಳು ಮಾಡುವುದು ಅವರ ಉದ್ದೇಶಗಳಲ್ಲಿ ಒಂದು. ಅಂತರಾಷ್ಟ್ರೀಯ ಮಟ್ಟಗಳಲ್ಲಿ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ ಆಗಿರಬಹುದು ಎಂದು ಕೇಂದ್ರ ಗುಪ್ತಚರ ವಿಭಾಗ ಶಂಕೆ ವ್ಯಕ್ತಪಡಿಸಿದೆ.
ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು
ಗತ್ಯೆಗೀಡಾದ ನಿಜ್ಜರ್ ಅಕ್ಕಪಕ್ಕ ಯಾವಾಗಲೂ ಐಎಸ್‍ಐ ಏಜೆಂಟರೇ ಇರುತ್ತಿದ್ದರು. ಭಾರತದ ಪ್ರತಿಯೊಂದು ಚಲನವಲನದ ಬಗ್ಗೆಯೂ ಆತನಿಗೆ ಮಾಹಿತಿ ನೀಡುವುದು, ಭಾರತದ ವಿರುದ್ಧ ಎತ್ತಿಕಟ್ಟುವುದು ಅವರ ಉದ್ದೇಶವಾಗಿದೆ. ಇದರ ಮುಂದುವರಿದ ಭಾಗವಾಗಿಯೇ ನಿಜ್ಜರ್‍ನನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.