ಯಾದಗಿರಿ,ಏ.19-ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಕಿರಾಣೆ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ. ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಕಿರಾಣಿ ಶಾಪ್ ಓಪನ್ ಮಾಡಿದ ಮುಮ್ಮತಾಜ್ ಬೇಗಂ ಮೆಚ್ಚುಗೆ ಪಡೆದಿದ್ದಾರೆ.
ಬಿಸಿಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ, ಸರಕಾರದ ಗೃಹ ಲಕ್ಷ್ಮಿ ಯೋಜನೆ ಹಣ ಖರ್ಚು ಮಾಡದೇ ಹಣ ಸಂಗ್ರಹ,ಗೃಹಿಣಿಯರ ಸಬಲೀಕರಣಕ್ಕೆ ಆರ್ಥಿಕ ನೆರವು ಆದ ಹಣ,
ಪ್ರತಿ ತಿಂಗಳು ಮನೆ ಒಡತಿಗೆ ಪಾವತಿಯಾಗುವ 2 ಸಾವಿರ ಗೃಹ ಲಕ್ಷ್ಮಿ ಹಣ ಕೂಡಿಟ್ಟು, ಇಲ್ಲಿವರಗೆ ಒಟ್ಟು 42 ಸಾವಿರ ರೂಪಾಯಿ ಹಣದಲ್ಲಿ ಮನೆ ಜಾಗದಲ್ಲಿಯೇ ಕಿರಾಣಿ ಶಾಪ್ ಓಪನ್ ಮಾಡಿದ ಮುಮ್ಮತಾಜ್ ಬೇಗಂ ಸ್ವಾವಲಂಬಿ ಬದುಕಿಗೆ ಸಾರ್ಥಕ ಮೆರೆದಿದ್ದಾರೆ.
ಕಿರಾಣಿ ವಸ್ತುಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಮಹಿಳೆ, ರಾಜ್ಯಸರ್ಕಾರದ ಯೋಜನೆ ಹಣದಿಂದ ಸದುಪಯೋಗ ಪಡೆದಕೊಂಡಿದ್ದ ಮುಮ್ಮತಾಜ್,ಗೃಹ ಲಕ್ಷ್ಮಿ ಯೋಜನೆ 2 ಸಾವಿರ ರೂಪಾಯಿ ಹಣ ಸರಕಾರ ನೀಡುತ್ತಿರುವದಕ್ಕೆ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸಿದರು.