Sunday, April 20, 2025
Homeರಾಜ್ಯಕರೆಂಟ್, ನೀರು, ಹಾಲು, ಬಸ್ಸು, ಮೆಟ್ರೋ, ಡೀಸೆಲ್ ಆಯ್ತು ಈಗ ಮಕ್ಕಳ ಪಠ್ಯಪುಸ್ತಕ ದರವೂ ಹೆಚ್ಚಳ...

ಕರೆಂಟ್, ನೀರು, ಹಾಲು, ಬಸ್ಸು, ಮೆಟ್ರೋ, ಡೀಸೆಲ್ ಆಯ್ತು ಈಗ ಮಕ್ಕಳ ಪಠ್ಯಪುಸ್ತಕ ದರವೂ ಹೆಚ್ಚಳ ಗ್ಯಾರಂಟಿ..?!

Children's textbook prices also to Hike

ಬೆಂಗಳೂರು, ಏ.19- ಹಾಲು, ನೀರು, ವಿದ್ಯುತ್ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು ಪಠ್ಯಪುಸ್ತಕ ದರದ ಹೆಚ್ಚಳವನ್ನು ಸಹಿಸಿಕೊಳ್ಳಬೇಕಾಗಿದೆ. ಈ ಬಾರಿ ಪಠ್ಯಪುಸ್ತಕದ ದರಶೇ 10 ರಷ್ಟು ಏರಿಕೆಯಾಗಗಲಿದೆ. ದರ ಏರಿಕೆಯನ್ನು ಕರ್ನಾಟಕ ಟೆಕ್ಸ್ ಬುಕ್ ಸೊಸೈಟಿ ಖಚಿತಪಡಿಸಿದೆ.

ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಸಂಸ್ಥೆ ಮುಂಗಡ ಶೇ.10ರಷ್ಟು ಹಣವನ್ನು ಆನ್ ಲೈನ್ ಮೂಲಕ ಪಾವತಿಸಿಕೊಂಡಿತ್ತು. ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ 10 ರಷ್ಟು ದರ ಹೆಚ್ಚಳ ಮಾಡಿರುವುದು ಪೋಷಕರಿಗೆ ಹೊರೆಯಾಗಿ ಪರಿಣಮಿಸುವುದು ಖಚಿತವಾಗಿದೆ.

ಶಾಲಾ ಪಠ್ಯಪುಸ್ತಕದ ಬೆಲೆ ಏರಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾ‌ರ್ ಅವರು, ಕೇವಲ 10% ಅಲ್ಲ ಕೆಲ ಪುಸ್ತಕಗಳ ಮೇಲೆ 100% ವರೆಗೂ ದರ ಏರಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಹೊರೆಯನ್ನ ಖಾಸಗಿ ಶಾಲೆಗಳು ಪೋಷಕರ ಮೇಲೆನೇ ಹಾಕಬೇಕಾಗುತ್ತೆ. ಶಾಲಾ ಶುಲ್ಕದ ಜೊತೆಗೆನೇ ಈ ದರವನ್ನ ಸೇರಿಸೋದು ಅವಶ್ಯಕತೆ ಇರುತ್ತೆ ಎಂದಿದ್ದಾರೆ. ಈಗಾಗಲೇ ಎಲ್ಲದರ ಬೆಲೆ ಏರಿಕೆಯಾಗಿರೋದರಿಂದ ಜನರಿಗೆ ತೊಂದರೆ ಆಗ್ತಾ ಇದೆ ಎಂದು ಸಾಕಷ್ಟು ಬಾರಿ ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಪಠ್ಯ ಪುಸ್ತಕ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಿದೆ ಎಂದಿದ್ದಾರೆ.

RELATED ARTICLES

Latest News