ಕಿನ್ಶಾಸಾ,ಏ.19- ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಇಂಧನ ಸಾಗಿಸುತ್ತಿದ್ದ ದೋಣಿಗೆ ಬೆಂಕಿ ತಗುಲಿ ಕನಿಷ್ಠ 143 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಯುವ್ಯ ಡಿಆರ್ಸಿಯ ಕಾಂಗೋ ನದಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ ನೂರಾರು ಪ್ರಯಾಣಿಕರು ಮರದ ದೋಣಿಯಲ್ಲಿ ಜಮಾಯಿಸಿದ್ದರು ಎಂದು ಈ ಪ್ರದೇಶದ ರಾಷ್ಟ್ರೀಯ ಪ್ರತಿನಿಧಿಗಳ ನಿಯೋಗದ ಮುಖ್ಯಸ್ಥ ಜೋಸೆಫಿನ್-ಪೆಸಿಫಿಕ್ ಲೋಕುಮು ತಿಳಿಸಿದ್ದಾರೆ.ರುಕಿ ಮತ್ತು ವಿಶಾಲವಾದ ಕಾಂಗೋ ನದಿಯ ಸಂಗಮದಲ್ಲಿರುವ ಇಕ್ವೆಟೂರ್ ಪ್ರಾಂತ್ಯದ ರಾಜಧಾನಿ ಎಂಬಂಡಾಕಾ ಬಳಿ ಈ ದುರಂತ ಸಂಭವಿಸಿದೆ.
131 ಶವಗಳ ಮೊದಲ ಗುಂಪು ಪತ್ತೆಯಾಗಿದ್ದು, ಮತ್ತೆ ಇನ್ನೂ 12 ಶವಗಳನ್ನು ಹೊರತೆಗೆಯಲಾಗಿದೆ. ಅವುಗಳಲ್ಲಿ ಹಲವು ಸುಟ್ಟುಹೋಗಿವೆ ಎಂದು ಲೋಕುಮು ತಿಳಿಸಿದರು.ಶವಗಳನ್ನು ಹೂಳಲು ಸಹಾಯ ಮಾಡಿದ್ದೇನೆ ಎಂದು ಹೇಳಿದ ಸ್ಥಳೀಯ ನಾಗರಿಕ ಸಮಾಜದ ಮುಖಂಡ ಜೋಸೆಫ್ ಲೋಕೊಂಡೋ,
ತಾತ್ಕಾಲಿಕ ಸಾವಿನ ಸಂಖ್ಯೆ 145 ಆಗಿದೆ: ಕೆಲವರು ಸುಟ್ಟುಹೋದರು, ಇತರರು ಮುಳುಗಿದರು ಎಂದು ಹೇಳಿದರು. ಆನ್ಬೋರ್ಡ್ ಅಡುಗೆ ಬೆಂಕಿಯಿಂದ ಹೊತ್ತಿಕೊಂಡ ಇಂಧನ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಲೋಕುಮು ಹೇಳಿದರು.ಒಬ್ಬ ಮಹಿಳೆ ಅಡುಗೆ ಮಾಡಲು ಬೆಂಕಿಯನ್ನು ಹೊತ್ತಿಸಿದಾಗ ಆಕಸಿಕವಾಗಿ ಇಡಿ ದೋಣಿಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.