ಬೆಂಗಳೂರು,ಏ.19– ಭಾರತದ ಹಿಂದೂ ಧಾರ್ಮಿಕ ಪವಿತ್ರ ಗ್ರಂಥವಾದ ಭಗವದ್ಗೀತೆ ಹಾಗೂ ಭರತಮುನಿ ರಚಿಸಿರುವ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋ ಮನ್ನಣೆ ದೊರೆತಿರುವುದು ಭಾರತೀಯರಿಗೆ ದೊರಕಿದ ಜಾಗತಿಕ ಗೌರವವಾಗಿದೆ.
ಯುನೆಸ್ಕೋದ ವಿಶ್ವ ಸರಣೆ ನೋಂದಣಿ ಯಲ್ಲಿ ಸೇರಿರುವುದು ನಮ ದೇಶದ ಜ್ಞಾನ ಸಂಸ್ಕೃತಿ, ಇತಿಹಾಸ ಹಾಗೂ ಸಮದ್ಧತೆಯ ಹಿರಿಮೆಯನ್ನು ಸಾಕ್ಷೀಕರಿಸುತ್ತದೆ.ಇದು ಭಾರತದ ಶ್ರೀಮಂತ ಸಂಸ್ಕೃತಿಗೆ ಶ್ರೇಷ್ಠ ಗೌರವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಣ್ಣಿಸಿದ್ದಾರೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪ್ಟೋ್ ಮಾಡಿರುವ ಅವರು, ದೇಶದ ಹೆಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತತ್ವದಲ್ಲಿ ನಮ ಪರಂಪರೆಯ ರಕ್ಷಣೆ, ಐತಿಹಾಸಿಕ ಸಾರಕಗಳ ಅಭಿವದ್ಧಿ, ನಮ ಸಂಸ್ಕೃತಿಯ ಪೋಷಣೆಯ ಕಾರ್ಯ ಸಮರೋಪಾದಿಯಲ್ಲಿ ಸಾಗಿರುವುದು ವಿಶ್ವವೇ ಭಾರತವನ್ನು ಗೌರವದಿಂದ ನೋಡುತ್ತಿರುವುದು ಹೆಮೆಯ ಸಂಗತಿ ಎಂದು ಕೊಂಡಾಡಿದ್ದಾರೆ.