Sunday, April 20, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನ : ಕಾರಿನೊಳಗೆ ಅಸಿಸ್ಟೆಂಟ್‌ ಅಕೌಂಟೆಂಟ್‌ ಸಾವು

ಹಾಸನ : ಕಾರಿನೊಳಗೆ ಅಸಿಸ್ಟೆಂಟ್‌ ಅಕೌಂಟೆಂಟ್‌ ಸಾವು

Hassan: Assistant accountant dies inside car

ಹಾಸನ,ಏ.19-ಕಾರಿನೊಳಗೆ ಗ್ರಾಮ ಪಂಚಾಯಿತಿ ಅಸಿಸ್ಟೆಂಟ್‌ ಒಬ್ಬರು ಅನುಮಾನ್ಪದವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶಿವಪ್ರಸಾದ್‌ (32) ಮೃತಪಟ್ಟ ವ್ಯಕಿ.

ದಿಡಗ ಗ್ರಾಮಪಂಚಾಯಿತಿಯಲ್ಲಿ ಅಕೌಂಟೆಂಟ್‌ಆಗಿ ಶಿವಪ್ರಸಾದ್‌ ರವರು ಕೆಲಸ ಮಾಡುತ್ತಿದ್ದರು. ಅತೀಯಾಗಿ ಮದ್ಯಸೇವಿಸುತ್ತಿದ್ದ ಈತ ನಿನ್ನೆ ತಡರಾತ್ರಿ ಕಾರಿನೊಳಗೆ ಮಲಗಿದ್ದರು.ರಸ್ತೆ ಮದ್ಯದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಕೂಡಲೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನೊಳಗೆ ಕೀ ಇರುವುದು ಕಂಡುಬಂದಿದೆ. ಡೋರ್‌ ಓಪನ್‌ಆಗದಿದ್ದಾಗ ಮೆಕಾನಿಕ್‌ ನನ್ನು ಕರೆಸಿ ಬಾಗಿಲನ್ನು ತೆರೆಸಿ ನೋಡಿದಾಗ ಶಿವಪ್ರಸಾದ್‌ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆಕೈಗೊಂಡಿದ್ದಾರೆ.

RELATED ARTICLES

Latest News