Monday, April 21, 2025
Homeಮನರಂಜನೆಕಾರು ಅಪಘಾತ : ತಮಿಳು ನಟ ಅಜಿತ್‌ಕುಮಾರ್ ಪಾರು

ಕಾರು ಅಪಘಾತ : ತಮಿಳು ನಟ ಅಜಿತ್‌ಕುಮಾರ್ ಪಾರು

Massive Accident for Actor Ajith Kumar’s Car – Engine Crushed in Collision

ಬೆಲ್ಜಿಯಂ, ಏ.20- ಕಾಲಿವುಡ್ ನ ಸ್ಟಾರ್ ನಟ, ತಲ ಅಜಿತ್ ಕುಮಾರ್ ಅವರು ಚಲಿಸುತ್ತಿದ್ದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಬ್ಯುಜಿ ನಟರಾಗಿದ್ದರೂ, -ಅವರಲ್ಲಿ ಕಾರ್ ರೇಸ್ ನ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ. ದೇಶ, ವಿದೇಶಗಳಲ್ಲಿ ನಡೆಯುವ ಕಾರ್ ರೇಸ್ ನಲ್ಲಿ ಅಜಿತ್ ಪಾಲ್ಗೊಂಡು ಪ್ರಶಸ್ತಿ ಗೆದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಆತಂಕವನ್ನು ತಂದು ಒಡ್ಡುತ್ತಾರೆ.

ಇದಕ್ಕೆ ಕಾರಣ ಅಜಿತ್ ಕುಮಾರ್ ಅವರು ಕಾರ್ ರೇಸ್ ನಲ್ಲಿ ಪಾಲ್ಗೊಳ್ಳುವ ವೇಳೆ ಹಲವು ಬಾರಿ ಅಪಘಾತಕ್ಕೀಡಾಗಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಈಗ ಅಜಿತ್ ಅವರು ಮತ್ತೊಮ್ಮೆ ಅಪಘಾತಕ್ಕೆ ಈಡಾಗಿರುವ ಸುದ್ದಿಯು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಬೆಳ್ಳಿಯಂನಲ್ಲಿ ನಡೆಯುತ್ತಿರುವ ಕಾರಿನ ರೇಸ್‌ನ ನಿಮಿತ್ತ ಅಜಿತ್ ಪೂರ್ವ ತಯಾರಿಯಲ್ಲಿದ್ದು, ಮಳೆ ಬಿದ್ದ ಕಾರಣ ಟ್ರ್ಯಾಕ್ ಒದ್ದೆಯಾಗಿತ್ತು. ಇದರ ನಡುವೆಯೂ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ತಲ (ಅಜಿತ್) ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅವರ ಕಾಲಿಗೆ ಅಲ್ಪ ಪ್ರಮಾಣದಲ್ಲಿ ಗಾಯವಾಗಿದ್ದು, ಇದನ್ನು ಅವರ ತಂಡದ ಇತರ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್ ಮಾಡಿದ್ದಾರೆ.

2025ರ ಫೆಬ್ರವರಿ 23 ರಂದು ಸ್ಪೇನ್ ನಲ್ಲಿ ನಡೆದಿದ್ದ ದುಬೈ ಗ್ರಾಂಡ್ ಫಿಕ್ಸ್ ಕಾರು ರೇಸಿನ ಅಭ್ಯಾಸದ ವೇಳೆಯು ಅಜಿತ್ ಅವರ ಕಾರು ಅಪಘಾತಕ್ಕೀಡಾಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಇದಕ್ಕೂ ಮುನ್ನ ಫೋರ್ಚುಗಲ್ ನಡೆದ ಕಾರ್ ರೇಸ್‌ನ ವೇಳೆಯು ಅವರ ಕಾರು ಅಪಘಾತಕ್ಕೀಡಾದರೂ ಯಾವುದೇ ಗಾಯಗಳಾಗದೆ ಪಾರಾಗಿದ್ದರು.

RELATED ARTICLES

Latest News