Monday, April 21, 2025
Homeರಾಜ್ಯಜನಿವಾರ ತೆಗೆಸಿದವರ ವಿರುದ್ಧ ಕಠಿಣ ಕ್ರಮ ; ಸಿಎಂ

ಜನಿವಾರ ತೆಗೆಸಿದವರ ವಿರುದ್ಧ ಕಠಿಣ ಕ್ರಮ ; ಸಿಎಂ

Strict action against those who took Janivara; CM

ಬೆಂಗಳೂರು,ಏ.21– ಸಿಇಟಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ವಿಚಾರದಲ್ಲಿ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಿವಾರದ ವಿಚಾರದಲ್ಲಿ ಯಾರು ತಪ್ಪು ಮಾಡಿದ್ದಾರೋ ಅಂತವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ಕೊಡಲಾಗಿದೆ. ಪರೀಕ್ಷಾ ನಿಯಮ ಮೀರಿ ವರ್ತಿಸಿರುವ ಹಾಗೂ ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಲಿದೆ ಎಂದರು.

ರೋಹಿತ್‌ ವೇಮುಲ ಹೆಸರಿನಲ್ಲಿ ಕಾಯ್ದೆ ತರುವ ವಿಚಾರಕ್ಕೆ ಸಂಬಂಽಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗ್ಗೆ ಕರಡು ರಚಿಸಲು ಹೇಳಿದ್ದೇವೆ ಎಂದು ತಿಳಿಸಿದರು.

RELATED ARTICLES

Latest News