Monday, April 21, 2025
Homeರಾಷ್ಟ್ರೀಯ | Nationalನನ್ನ ಹತ್ಯೆಗೆ ಖಲಿಸ್ತಾನಿಗಳು ಸಂಚು ಮಾಡಿದ್ದಾರೆ : ಕೇಂದ್ರ ಸಚಿವ ರವನಿತ್‌ ಬಿಟ್ಟು

ನನ್ನ ಹತ್ಯೆಗೆ ಖಲಿಸ್ತಾನಿಗಳು ಸಂಚು ಮಾಡಿದ್ದಾರೆ : ಕೇಂದ್ರ ಸಚಿವ ರವನಿತ್‌ ಬಿಟ್ಟು

Plotted my assassination: Minister Ravneet Singh alleges pro-Khalistan elements

ನವದೆಹಲಿ, ಏ.21– ಖಲಿಸ್ತಾನಿ ಶಕ್ತಿಗಳು ನನ್ನ ಹತ್ಯೆಗೆ ಸಂಚು ರೂಪಿಸುತ್ತಿವೆ ಎಂದು ಕೇಂದ್ರ ಸಚಿವ ರವನಿತ್‌ ಬಿಟ್ಟು ಅವರು ಹೇಳಿಕೊಂಡಿದ್ದಾರೆ.ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೋರಿಕೆಯಾದ ಚಾಟ್‌ನ ಸ್ಕೃಈನ್‌ ಶಾಟ್‌ಗಳ ಮೂಲಕ ಪಿತೂರಿಯನ್ನು ಬಹಿರಂಗಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‌ ಅನ್ನು ಅಸ್ಥಿರಗೊಳಿಸಲು ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಕೇಂದ್ರವು ಅವಕಾಶ ನೀಡುವುದಿಲ್ಲ ಎಂದು ರವನಿತ್‌ ಬಿಟ್ಟು ಹೇಳಿದರು. ತೀವ್ರಗಾಮಿ ಬೋಧಕ ಅಮೃತ್ಪಾಲ್‌ ಸಿಂಗ್‌ ಅವರ ಮುಖ್ಯಸ್ಥರಾಗಿರುವ ವಾರಿಸ್‌‍ ಪಂಜಾಬ್‌ ದೇ ಸಂಘಟನೆಗೆ ಸಂಬಂಧಿಸಿದ ಕೆಲವು ಖಲಿಸ್ತಾನ್‌ ಪರ ಶಕ್ತಿಗಳು ಪಂಜಾಬ್‌ನಲ್ಲಿ ತಮ್ಮನ್ನು ಮತ್ತು ಇತರ ರಾಜಕೀಯ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿವೆ ಎಂದು ಕೇಂದ್ರ ಸಚಿವರೂ ಆರೋಪಿಸಿದ್ದಾರೆ.

ವಾರಿಸ್‌‍ ಪಂಜಾಬ್‌ ದೇ ನಾಯಕರು ರೂಪಿಸಿರುವ ಪಿತೂರಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಟ್ಟು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂತಹ ಗುಂಪುಗಳ ಚಟುವಟಿಕೆಗಳು ರಾಜ್ಯವನ್ನು ಅದರ ಕರಾಳ ಭೂತಕಾಲವನ್ನು ನೆನಪಿಸುವ ಅಸ್ಥಿರತೆಯತ್ತ ತಳ್ಳುತ್ತಿವೆ ಎಂದು ಅವರು ಎಚ್ಚರಿಸಿದರು.

RELATED ARTICLES

Latest News