ಹಾಸನ,ಏ.22- ನಾಲ್ಕು ವರ್ಷಗಳ ನಂತರ ಐತಿಹಾಸಿಕ ಬೇಲೂರು ಶ್ರೀ ಚನ್ನಕೇಶವ ಸ್ವಾಮಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಚನ್ನಕೇಶವ ಸ್ವಾಮಿ ವಿಗ್ರಹಕ್ಕೆ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಕವಿದ ವಾತಾವರಣ ಎದುರಾಗಿತ್ತು. ಈ ಬಾರಿ ಆಗಸದಲ್ಲಿ ಶುಭ್ರ ವಾತಾವರಣವಿದ್ದು, ಸೂರ್ಯರಶ್ಮಿ ವಿಗ್ರಹವನ್ನು ಸ್ಪರ್ಶಿಸಿದ್ದು, ಈ ಅಪರೂಪದ ಕ್ಷಣಗಳನ್ನು ಭಕ್ತರು ಕಣ್ಣುಂಬಿಕೊಂಡಿದ್ದಾರೆ.
ಪ್ರತಿ ವರ್ಷ 21 ಮತ್ತು 22 ರಂದು ಚನ್ನಕೇಶವ ಸ್ವಾಮಿ ಹಾಗೂ ಗೋಪುರಕ್ಕೆ 6.15ಕ್ಕೆ ಸರಿಯಾಗಿ ಸೂರ್ಯ ರಶ್ಮಿ ಸ್ಪರ್ಶಿಸುತ್ತದೆ. ಇದಾದ ಬಳಿಕ ಕ್ಷೀರದಿಂದ ಸ್ವಾಮಿ ಪಾದ ತೊಳೆದು ಅರ್ಚಕರು ಪೂಜೆ ಸಲ್ಲಿಸುತ್ತಾರೆ.
ಕಳೆದ ನಾಲ್ಕು ವರ್ಷಗಳಿಂದ ನಿರಾಸೆಯಿಂದ ಕಾದು ಬೇಸರದಿಂದ ಹಿಂದಿರುಗುತ್ತಿದ್ದ ಭಕ್ತಗಣ ಈ ಬಾರಿ ಅಪರೂಪದ ದೃಶ್ಯವನ್ನು ಕಣ್ಣುಂಬಿಕೊಂಡು ಪುನೀತರಾಗಿದ್ದಾರೆ.