ದೊಡ್ಡಬಳ್ಳಾಪುರ,ಏ.24- ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ದೊಡ್ಡಬಳ್ಳಾಪುರ ತಾಲ್ಲೂಕಿನ 95 ಪ್ರವಾಸಿಗರು ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಪಹಲ್ಯಾಮನ ಬೈಸರನ್ ವ್ಯಾಲಿಯ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಗುಂಡಿನ ದಾಳಿ ನಡೆದಿತ್ತು. ಆದಾಗ್ಯೂ ಕಾಶ್ಮೀರದ ಪ್ರವಾಸದಲ್ಲಿದ್ದ ತಾಲ್ಲೂಕಿನ 95 ಮಂದಿಯೂ ಸುರಕ್ಷಿತರಾಗಿದ್ದಾರೆ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಹಾಡೋನಹಳ್ಳಿ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆ ಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ ಸುಮಾರು 95 ಮಂದಿ 9 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಏ.19ರಂದು ಬೆಳಗ್ಗೆ ಎರಡು ತಂಡಗಳ ಮೂಲಕ ವಿಮಾನಗಳಲ್ಲಿ 21 ಮಂದಿಯ ಒಂದು ತಂಡ ಅಮೃತಸರ ತಲುಪಿದರೆ, ಟಿಕೆಟ್ ಗೊಂದಲದ ಕಾರಣ 74 ಮಂದಿಯ ಮತ್ತೊಂದು ತಂಡ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರಕ್ಕೆ ತೆರಳಿ ಒಟ್ಟಾಗಿದ್ದಾರೆ.
ಅಮೃತಸರದಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀ ನಗರಕ್ಕೆ ತೆರಳಿದ್ದರು. ಇವರು ವಾಸ್ತವ್ಯ ಹೂಡಬೇಕಿದ್ದ ಹೋಟೆಲ್ ಉಗ್ರರ ದಾಳಿಗೆ ಒಳಗಾದ ಪಹಲ್ಯಾಮ್ ಬೈಸರನ್ ಸಮೀಪದಲ್ಲಿಯೇ ಎರಡು ದಿನಗಳ ಕಾಲ 45 ರೂಂ ನಿಗದಿಯಾಗಿತ್ತು.
ಆದರೆ ಅದೃಷ್ಟವಶಾತ್ ಆ ರಸ್ತೆಯಲ್ಲಿನ ಬೆಟ್ಟ ಕುಸಿದು ಸಂಚಾರ ಸ್ಥಗಿತಗೊಂಡ ಕಾರಣ. ಮಾರ್ಗ ಬದಲಿಸಿದ ಬೆಂಗಳೂರಿನ 15 ಮಂದಿ ಸೇರಿದಂತೆ 110 ಮಂದಿಯ ಪ್ರವಾಸಿಗರು, ಕಟ್ರಾ ವೈಷ್ಣವಿ ದೇವಿಯ ದರ್ಶನ ಮುಗಿಸಿ, ಕೊನುಮನಾಲಿಗೆ ಹಿಂತಿರುಗಿದ್ದಾರೆ.
ಒಂದು ವೇಳೆ ಶ್ರೀನಗರಕ್ಕೆ ತೆರಳುವ ಮಾರ್ಗದಲ್ಲಿನ ಬೆಟ್ಟ ಕುಸಿಯದೇ ಇದ್ದಲ್ಲಿ, ನಿದಿಯಂತೆ ಹೋಟೆಲ್ ತಲುಪಿದ್ದರೆ ದೊಡ್ಡಬಳ್ಳಾಪುರದಿಂದ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರು ಕೂಡ ಉಗ್ರರ ದಾಳಿಗೆ ಸಿಲುಕುವ ಅಪಾಯ ಇತ್ತು ಎಂದು ತಿಳಿದು ಬಂದಿದೆ.
ಶ್ರೀನಗರದಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಕಾಶ್ಮೀರ ಪ್ರವಾಸಕ್ಕೆ ತೆರಳಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿಗರ ಕುರಿತು ಗ್ರಾಮಸ್ಥರು, ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು, ಆದರೆ ದೇವಾಲಯಗಳ ದರ್ಶನ ಬಳಿಕ ಮೊಬೈಲ್ ಆನ್ ಮಾಡಿದ ಪ್ರವಾಸಿಗರೆಲ್ಲರೂ ಸಂಪರ್ಕಕ್ಕೆ ದೊರಕಿದ ಕಾರಣ ನಿಟ್ಟಿಸಿರು ಬಿಟ್ಟಿದ್ದಾರೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ