ಬೆಂಗಳೂರು,ಏ.24- ಜಮು-ಕಾಶೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ನಡೆದ ದೃಶ್ಯಗಳು ಅತ್ಯಂತ ಘೋರ ಮತ್ತು ಭಯಾನಕ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಶ್ಲೇಷಿಸಿದ್ದಾರೆ.
ಜಮು-ಕಾಶೀರದಿಂದ 177 ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದ ಬಳಿಕ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರ ಮತ್ತು ಸೂಚನೆಗಳು ಶ್ಲಾಘನೀಯ. ಪೊಲೀಸ್ ಅಧಿಕಾರಿ ಚೇತನ್ ಅವರ ಸಹಕಾರವೂ ಸರಣೀಯ ಎಂದರು.
ಶೇ.99ರಷ್ಟು ನಮ ಕಾರ್ಯಾಚರಣೆ ಯಶಸ್ವಿಯಾಗಿದೆ. ಜಮು-ಕಾಶೀರದಲ್ಲಿನ ಕನ್ನಡಿಗರ ಸಹಕಾರವೂ ಅವಿಸರಣೀಯ. 177 ಕನ್ನಡಿಗರನ್ನು ಶ್ರೀನಗರದಿಂದ ಬೆಂಗಳೂರಿಗೆ ಕರೆತರಲಾಗಿದೆ. ಇನ್ನೂ ಕೆಲವರು ಜಮು ಮತ್ತು ಕಟ್ರದಲ್ಲಿದ್ದಾರೆ. ಅವರಿಗೆ ಈಗಾಗಲೇ ಮಾರ್ಗದರ್ಶನ ನೀಡಲಾಗಿದ್ದು, ಸ್ಥಳೀಯ ಅಧಿಕಾರಿಗಳ ಜೊತೆ ಚರ್ಚಿಸಿ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪ್ರವಾಸದ ಯೋಜನೆ ರೂಪಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಸಂಕಷ್ಟಕ್ಕೆ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ಮುಖ್ಯಮಂತ್ರಿಯವರ ಸೂಚನೆಯಂತೆ ನಾನು ಯಶಸ್ವಿಯಾಗಿದ್ದೇನೆ. ಪಹಲ್ಗಾಮ್‌ನಲ್ಲಿ ದಾಳಿಯ ಬಳಿಕ ಅಲ್ಲಿನ ವಾತಾವರಣವನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ದುಗುಡ ವ್ಯಕ್ತಪಡಿಸಿದರು.
ಇದು ಅತ್ಯಂತ ಭಯಾನಕವಾದ ಅನುಭವ. ಹೆಣ್ಣುಮಕ್ಕಳ ಕಣ್ಣೆದುರೇ ಅವರ ಗಂಡನನ್ನು ಕೊಲ್ಲಲಾಗಿದೆ. ಆ ವೇಳೆ ಹೆಣ್ಣುಮಕ್ಕಳು ನಮನ್ನೂ ಕೊಲ್ಲಿ ಎಂದು ಪ್ರತಿರೋಧಿಸಿರುವ ಧೈರ್ಯ ಪ್ರದರ್ಶಿಸಿರುವುದು ವರ್ಣಿಸಲು ಸಾಧ್ಯವಿಲ್ಲ. ನಮ ದೇಶದ ಹೆಣ್ಣು ಮಕ್ಕಳು ಮಾತ್ರ ಈ ರೀತಿ ಧೈರ್ಯ ಪ್ರದರ್ಶಿಸಲು ಸಾಧ್ಯ. ಇದನ್ನು ನಾನು ಕಣ್ಣಿನಲ್ಲಿ ನೇರವಾಗಿ ನೋಡಿಲ್ಲ. ಆದರೆ ಕೇಳಿ ತಿಳಿದುಕೊಂಡ ಪ್ರಕಾರ ಅತೀ ಘೋರವಾಗಿದೆ ಎಂದರು.
ಭದ್ರತಾ ಲೋಪದ ಬಗ್ಗೆ ಈ ಸಂದರ್ಭದಲ್ಲಿ ನಾನು ಮಾತನಾಡುವುದಿಲ್ಲ. ಸದ್ಯಕ್ಕೆ ನಾನು ರಾಜಕೀಯ ಬೆರೆಸಲು ಬಯಸುವುದಿಲ್ಲ. ಮುಖ್ಯಮಂತ್ರಿಯವರ ಸೂಚನೆಯಂತೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಮಗ್ನನಾಗಿದ್ದೇನೆ. ನಮ ಜೊತೆ 177 ಮಂದಿ ಬಂದಿದ್ದಾರೆ. ಉಳಿದ 13 ಮಂದಿ ಸಂಜೆಯ ವಿಮಾನದಲ್ಲಿ ಬರುತ್ತಾರೆ.
ಬಾಕಿ ಇರುವವರು ನಾಳೆ ಬೆಳಿಗ್ಗೆ ವಿಮಾನದಲ್ಲಿ ಬರುತ್ತಾರೆ. ಎಲ್ಲರಿಗೂ ವಿಮಾನಗಳು ಬುಕ್ ಆಗಿವೆ ಎಂದು ತಿಳಿಸಿದರು.ಪಾಕಿಸ್ತಾನಕ್ಕೆ ಭಾರತ ದೇಶ ತಕ್ಕ ಪ್ರತಿಕ್ರಿಯೆ ನೀಡಲಿದೆ. ಅದನ್ನು ಇಡೀ ಜಗತ್ತೇ ನೋಡುತ್ತದೆ. ನಮ ಸೇನೆಯ ಸಾಮರ್ಥ್ಯ ಯಾವ ರೀತಿ ಉತ್ತರ ನೀಡಬೇಕು ಎಂಬುವಷ್ಟು ಬಲವಾಗಿದೆ ಎಂದರು.
- ಡಾ.ರಾಜ್ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಘೋಷಣೆ
- ಪೆಹಲ್ಗಾಮ್ ಉಗ್ರರ ದಾಳಿಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ‘ಪಾಪಿ’ಗಳು
- ಭಾರತದೆಲ್ಲೆಡೆ ಪಾಪಿಸ್ತಾನದ ವಿರುದ್ಧ ಪ್ರತಿಕಾರದ ಕೂಗು
- ಮೊದಲ ಪ್ರವಾಸವೇ ಅಂತಿಮಯಾತ್ರೆಯಾದ ಉದ್ಯಮಿಯ ದುರಂತ ಕಥೆ
- ಮುಗಿಲು ಮುಟ್ಟಿದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳ ಆಕ್ರಂದನ, ಪ್ರತೀಕಾರಕ್ಕೆ ಕೂಗು