ಪುಣೆ,ಏ.24- ಕುರುಕಲು ತಿಂಡಿಗಳ ಉತ್ಪಾದಕ ಸಂಸ್ಥೆ ಫರ್ಸಾನ್ ಬ್ರ್ಯಾಂಡ್‌ನ ವ್ಯಾಪಾರ ವಹಿವಾಟನ್ನು ವಿಸ್ತರಿಸುವುದರಲ್ಲಿ ಜೀವನಪರ್ಯಂತ ದುಡಿದಿದ್ದ ಉದ್ಯಮಿ ಕೌಸ್ತುಭ್ ಗಣಬೋಟೆ ಅವರು ಅಪರೂಪಕ್ಕೊಮೆ ಪ್ರವಾಸದ ಮೋಜು ಸವಿಯಲು ಹೋಗಿ ಜಮು-ಕಾಶೀರದಲ್ಲಿ ಹುತಾತರಾದ ದುರಂತ ಕಥೆಯಿದು.ಗುಜರಾತ್-ರಾಜಸ್ಥಾನ್ ದೇಶೀಯ ರುಚಿಯ ಕುರುಕಲು ತಿಂಡಿಗಳು (ಸ್ನ್ಯಾಕ್‌್ಸ) ಹಾಗೂ ಇತರ ಆಹಾರೋತ್ಪನ್ನಗಳ ಬ್ರ್ಯಾಂಡ್ ಅನ್ನು ಕಟ್ಟಿ, ಬೆಳೆಸಿ ಉತ್ತರಭಾರತದಲ್ಲಿ ಪ್ರಮುಖ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದ ಕೌಸ್ತುಭ್ ಗಣಬೋಟೆ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಸಂಸ್ಥೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರು. ಅತ್ಯಂತ ಕಠಿಣ ಪರಿಶ್ರಮದಿಂದ ವ್ಯಾಪಾರವನ್ನು ವಿಸ್ತರಿಸುವತ್ತಲೇ ಸದಾಕಾಲ ಚಿಂತಿಸುತ್ತಿದ್ದರು.ಕುಟುಂಬದ ಸದಸ್ಯರ ಒತ್ತಾಯಕ್ಕೆ ಮಣಿದು ವ್ಯಾಪಾರದಿಂದ ಕೊಂಚ ಬಿಡುವು ಪಡೆದು ವಿಶ್ರಮಿಸಲು ಜಮು-ಕಾಶೀರದ ಪ್ರವಾಸಕ್ಕೆ ತೆರಳಿದ್ದರು.
ಪತ್ನಿ ಸಂಗೀತ ಹಾಗೂ ಕುಟುಂಬ ಸದಸ್ಯರೊಂದಿಗೆ ಪಹಲ್ಗಾಮ್‌ನ ಪ್ರವಾಸಿತಾಣದಲ್ಲಿ ಮೋಜಿನಲ್ಲಿದ್ದ ಕೌಸ್ತುಭ್ ಗಣಬೋಟೆ ಅವರಿಗೆ ಭಯೋತ್ಪಾದಕರು ಯಮಕಿಂಕರರಾಗಿ ವಕ್ಕರಿಸಿದ್ದಾರೆ.ಜೀವನದಲ್ಲೇ ಮೊದಲ ಬಾರಿಗೆ ಪ್ರವಾಸ ಹೋಗಿದ್ದ ಕೌಸ್ತುಭ್‌ಗಣಬೋಟೆ ಅವರ ಅಂತಿಮ ಯಾತ್ರೆಯಾಗಿರುವ ದುರಂತಕ್ಕೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಬಲವಂತವಾಗಿ ಪತಿಯನ್ನು ಕರೆದುಕೊಂಡು ಹೋಗಿದ್ದಕ್ಕಾಗಿ ಪತ್ನಿ ಸಂಗೀತ ಬಿಕ್ಕಳಿಸಿ ಕುಸಿದುಹೋಗಿದ್ದಾರೆ.
ಕೌಸ್ತುಭ್ ಗಣಬೋಟೆ ಅವರು ತಮ ಕುಟುಂಬದ ಜೊತೆಗೆ ಆತೀಯರಾಗಿದ್ದ ಸಂತೋಷ್ ಅವರನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಎಂಟು ದಿನಗಳ ಈ ಯಾತ್ರೆಯನ್ನು ಕೌಸ್ತುಬ್ ಗಣಬೋಟೆ ಅವರೊಂದಿಗೆ ಸಂತೋಷ್ ಜಗದಾಳೆ ಕೂಡ ಹತ್ಯೆಯಾಗಿದ್ದಾರೆ. ಅವರ ಪತ್ನಿ ಪ್ರಗತಿ, ಪುತ್ರಿ ಅಶಾವರಿ ಬದುಕುಳಿದಿದ್ದಾರೆ. ಎಂಟು ದಿನಗಳ ಪ್ರವಾಸಕ್ಕೆಂದು ಸಂತೋಷದಿಂದ ತೆರಳಿದವರು ಕೊನೆಗೆ ದುಃಖದ ಮಡುವಿನಲ್ಲಿ ನರಳುವಂತಾಗಿದೆ. ಕೌಸ್ತುಭ್ ಗಣಬೋಟೆ ಇತ್ತೀಚೆಗಷ್ಟೇ ಹೊಸದಾಗಿ ಮನೆ ಕಟ್ಟಿಸಿದ್ದರು. ಕಾರ್ಖಾನೆ ಮತ್ತಷ್ಟು ವಿಸ್ತರಿಸಿದ್ದರು.
12 ವರ್ಷಗಳ ಹಿಂದೆ ಟೆಂಪೋದಲ್ಲಿ ಪ್ರಯಾಣಿಸುವಾಗ ಗಂಭೀರ ಅಪಘಾತವಾಗಿ ಸುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದರು. ಅದನ್ನು ಎರಡನೇ ಹುಟ್ಟು ಎಂದು ಹೇಳಿಕೊಳ್ಳುತ್ತಿದ್ದರು. ಹಲವಾರು ಕಷ್ಟನಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಂಡಿದ್ದ ಕೌಸ್ತುಭ್‌ಗಣಬೋಟೆ ಜಮು-ಕಾಶೀರದಲ್ಲಿ ಕ್ಷಣಾರ್ಧದಲ್ಲಿ ಉಗ್ರರ ಗುಂಡಿಗೆ ಒಳಗಾಗಿದ್ದು ನೆರೆಹೊರೆಯವರನ್ನು ತೀವ್ರವಾಗಿ ಬಾಧಿಸುತ್ತಿದೆ. ಅವರ ಸ್ನೇಹಿತ ಸಂತೋಷ್ ಇಂಟೀರಿಯರ್ ಡಿಸೈನರ್ ಆಗಿದ್ದು ಸ್ವಂತ ಉದ್ಯಮ ನಡೆಸುತ್ತಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು.