ನವದೆಹಲಿ,ಏ.24- ಜಮು ಮತ್ತು ಕಾಶೀರದ ಪೆಹಲ್ಗಾಮ್ ನಲ್ಲಿ ನಡೆದ ಬೀಭತ್ಸ ಘಟನೆಗೆ ದೇಶಕ್ಕೆ ದೇಶವೇ ಮಮಲ ಮರುಗುತ್ತಿರುವಾಗಲೇ ಪಾಕಿಸ್ತಾನದ ಹೈಕಮೀಷನರ್ ಘಟನೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮೀಷನರ್ ಕಚೇರಿಯಲ್ಲಿ ಪುಹಲ್ಗಾಮ್ ಘಟನೆ ಸಂಭವಿಸಿದ ನಂತರ ಹೈಕಮೀಷನರ್ ಜೊತೆ ಅಲ್ಲಿನ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಇಂದು ಬೆಳಗ್ಗೆ ದೆಹಲಿ ಹೈಕಮೀಷನರ್ ಕಚೇರಿ ಮುಂದೆ ಆಕ್ರೋಶಗೊಂಡ ಸಾವಿರಾರು ಸಂಖ್ಯೆಯ ಭಾರತೀಯರು ಧಿಕ್ಕಾರದ ಘೋಷಣೆಗಳನ್ನು ಕೂಗಿ ತಕ್ಷಣವೇ ದೇಶ ಬಿಟ್ಟು ತೊಲಗುವಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಇಲ್ಲಿನ ಅನ್ನ, ಗಾಳಿ, ನೀರು ಸೇವಿಸಿ ಭಯೋತ್ಪಾದನೆ ಕೃತ್ಯಕ್ಕೆ ಬೆಂಬಲ ಕೊಡುವ ದೇಶದ್ರೋಹಿ ಹೈಕಮೀಷನರ್ ನಮ ದೇಶದಲ್ಲಿ ಇರಲು ನಾಲಾಯಕ್. ಕೂಡಲೇ ನಿಮ ಸಿಬ್ಬಂದಿ ಜೊತೆ ಗಂಟುಮೂಟೆ ಕಟ್ಟಿಕೊಂಡು ದೇಶಬಿಟ್ಟು ತೆರಳುವಂತೆ ಆಕ್ರೋಶ ಹೊರಹಾಕಿದ್ದಾರೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆಯುತ್ತಿದ್ದಂತೆ, ಭಾರತದಲ್ಲಿರುವ ಹೈಕಮಿಷನ್ ಬಂದ್ ಮಾಡುವಂತೆ ಸೂಚನೆ ನೀಡಲಾಯಿತು. ಈ ದಾಳಿಯ ನಡುವೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿತರಾಗಿದ್ದ ಉದ್ಯೋಗಿಯೊಬ್ಬರು ಕೇಕ್ ತೆಗೆದುಕೊಂಡು ಒಳಗೆ ಹೋಗುತ್ತಿದ್ದರು. ಅದನ್ನು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಯಾವುದೇ ಉತ್ತರವನ್ನು ಕೂಡ ಅವರು ನೀಡಲಿಲ್ಲ.
ಪಹಲ್ಗಾಮ್ ದಾಳಿಯ ಬಗ್ಗೆ ಪಾಕಿಸ್ತಾನ ಸಂತೋಷಗೊಂಡಿದ್ದು, ಅದನ್ನು ಸಂಭ್ರಮಿಸಲು ಭಾರತದಲ್ಲೇ ಕೇಕ್? ಕತ್ತರಿಸುತ್ತಿದೆಯೇ ಎನ್ನುವ ಊಹಾಪೋಹಗಳು ಎದ್ದಿವೆ. ಸತ್ಯ ಏನೇ ಇರಲಿ, ಪಾಕಿಸ್ತಾನಿ ಉದ್ಯೋಗಿ ಪ್ರತಿಕ್ರಿಯಿಸಲು ವಿಫಲರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಪಾಕಿಸ್ತಾನ ಹೈಕಮಿಷನ್ ಹೊರಗಿನ ಭದ್ರತೆ ವಾಪಸ್ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿದೆ. ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಭದ್ರತೆಯನ್ನು ಸಹ ಕಡಿತಗೊಳಿಸಲಾಗಿದೆ. ಇದೀಗ ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗೆ ಮೌನ ಆವರಿಸಿದೆ.