Friday, April 25, 2025
Homeಮನರಂಜನೆಡಾ.ರಾಜ್‌ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಘೋಷಣೆ

ಡಾ.ರಾಜ್‌ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಘೋಷಣೆ

Shivanna's new film announced on Dr. Raj's birthday

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸ್ಯಾಂಡಲ್‌ ವುಡ್‌ನ ತುಂಬಾ ಬಿಜಿಯ್ಟ್‌‍ ನಟ. ಇವರಷ್ಟು ಚಿತ್ರಗಳನ್ನು ಯಾವ ಎಂಗ್‌ ಹೀರೋಗಳು ಮಾಡಲು ಸಾಧ್ಯವಿಲ್ಲ ಬಿಡಿ.ಇಂದು ಇವರ ತಂದೆ, ಕರ್ನಾಟಕ ರತ್ನ ಡಾ.ರಾಜಕುರ್ಮಾ ಹುಟ್ಟುಹಬ್ಬದಂದೇ ಫೈರ್‌ ಪ್ಲೇ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯ ಪಡೆದುಕೊಳ್ಳುತ್ತಿದೆ.

ಹಾಗೆ ಅರ್ಜುನ್‌ ಜನ್ಯ ಆಕ್ಷನ್‌ ಕಟ್‌ ಹೇಳಿರುವ 45 ಬಿಡುಗಡೆಗೆ ರೆಡಿಯಾಗಿದೆ. ಕೆಲ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಈ ಸಂದರ್ಭದಲ್ಲಿ ಮತ್ತೊಂದು ಹೊಸ ಚಿತ್ರ ಘೋಷಣೆಯಾಗಿದೆ.

ಶ್ರಿತಿಕ್‌ ಮೋಷನ್‌ ಪಿಕ್ಚರ್ಸ್‌ ಸಂಸ್ಥೆ ಲಾಂಛನದಲ್ಲಿ ಸಾಗರ್‌, ಕೃಷ್ಣಕುಮಾರ್‌ ಹಾಗೂ ಸೂರಜ್‌ ಶರ್ಮ ಈ ನೂತನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್‌ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್‌, ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರಿಯ ಪುತ್ರ.

ಇತ್ತೀಚೆಗೆ ಶಿವರಾಜಕುರ್ಮಾ ಅವರನ್ನು ಭೇಟಿ ಮಾಡಿದ ನಿರ್ದೇಶಕ ಬಾಲಾಜಿ ಮಾಧವನ್‌ ಹಾಗೂ ನಿರ್ಮಾಪಕರಾದ ಸಾಗರ್‌ , ಕೃಷ್ಣಕುಮಾರ್‌ ಮತ್ತು ಸೂರಜ್‌ ಶರ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ.

ಚಿತ್ರದ ಕಥೆ ಕೇಳಿ ಶಿವಣ್ಣ ಸಂತಸಗೊಂಡಿದ್ದಾರೆ. ಸದ್ಯದಲ್ಲೇ ಶೀರ್ಷಿಕೆಯನ್ನು ಅದ್ದೂರಿಯಾಗಿ ಅನಾವರಣಗೊಳಿಸುವ ಸಿದ್ದತೆ ನಡೆಸಿರುವ ನಿರ್ಮಾಪಕರು ಆ ಸಮಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜ್‌ಕುಮಾರ್‌ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

RELATED ARTICLES

Latest News