ಲಖ್ನೋ,ಸೆ.27- ಉಳಿತಾಯ ಖಾತೆಯ ಬ್ಯಾಂಕ್ ಲಾಕರ್‍ನಲ್ಲಿಟ್ಟಿದ್ದ 18 ಲಕ್ಷ ಹಣಕ್ಕೆ ಗೆದ್ದಲು ಹುಳುಗಳು ಮುತ್ತಿಕೊಂಡು ಹಾಳಾಗಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‍ನಲ್ಲಿ ನಡೆದಿದೆ.ಅಲ್ಕಾ ಪಾಠಕ್ ಎಂಬುವರು 2022 ಅಕ್ಟೋಬರ್‍ನಲ್ಲಿ ಮಗಳ ವಿವಾಹಕ್ಕಾಗಿ ಉಳಿತಾಯ ಖಾತೆಯಲ್ಲಿ ಸಂಗ್ರಹಿಸಿದ್ದ 18 ಲಕ್ಷ ನಗದನ್ನು ಬ್ಯಾಂಕ್ ಲಾಕರ್‍ನಲ್ಲಿ ಸುರಕ್ಷಿತವಾಗಿಟ್ಟಿದ್ದರು.
ಇತ್ತೀಚೆಗೆ ಬ್ಯಾಂಕ್ ಅಕಾರಿಗಳು ಲಾಕರ್‍ನ ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ ಪರಿಶೀಲನೆಗಾಗಿ ಅಲ್ಕಾ ಅವರನ್ನು ಬ್ಯಾಂಕ್‍ಗೆ ಕರೆಸಿದಾಗ 18 ಲಕ್ಷ ನಗದಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದು ಬೆಳಕಿಗೆ ಬಂದಿತು.
ಲಾಕರ್ ತೆಗೆಯುತ್ತಿದ್ದಂತೆ ತನ್ನ ನೋಟುಗಳಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದನ್ನು ಕಂಡು ಅಲ್ಕಾ ಪಾಠಕ್ ಆಘಾತಕ್ಕೆ ಒಳಗಾಗದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕ್ ಐಎಸ್‍ಐ ಕೈವಾಡ ಬಯಲು
ಮಕ್ಕಳಿಗೆ ಟ್ಯೂಷನ್ ಹಾಗೂ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದ ಅವರು ನಗದು ಮತ್ತು ಚಿನ್ನದ ಆಭರಣಗಳನ್ನು ಭದ್ರತಾ ದೃಷ್ಟಿಯಿಂದ ಬ್ಯಾಂಕ್ ಲಾಕರ್‍ನಲ್ಲಿ ಇಟ್ಟುಕೊಂಡಿದ್ದರು. ಮಗಳ ವಿವಾಹಕ್ಕೆ ಸಾಲಸೋಲ ಮಾಡುವ ಬದಲು ಆಭರಣಗಳ ಖರೀದಿ ಹಾಗೂ ಮದುವೆಯ ಇತರೆ ಖರ್ಚುಗಳಿಗಾಗಿ 18 ಲಕ್ಷ ಹಣವನ್ನು ಲಾಕರ್‍ನಲ್ಲಿ ಇಡಲಾಗಿತ್ತು.
ಲಾಕರ್ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಗೆದ್ದಲು ಹುಳುಗಳು ಅಂಟಿಕೊಂಡಿವೆ ಎಂದು ಬ್ಯಾಂಕ್ ಅಕಾರಿಗಳು ತಿಳಿಸಿದ್ದಾರೆ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ.