ಶ್ರೀನಗರ, ಏ.27-ಪಹಲ್ಟಾಮ್ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕ ಮೇಲೆ ಕಠಿಣ ಕ್ರಮ ಮುಂದುವರಿಸಿರು ವುದರಿಂದ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಮೂವರು ಸಕ್ರಿಯ ಭಯೋತ್ಪಾದಕರ ಮನೆಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ.
ಕಳೆದ ವರ್ಷ ಭಯೋತ್ಪಾದಕ ಗುಂಪಿಗೆ ಸೇರಿದ್ದ ಅಫ್ಘಾನ್ ಶಫಿಯ ಮನೆಯನ್ನು ರಾತ್ರಿ ಶೋಪಿಯಾನ್ ಜಿಲ್ಲೆಯ ವಂಡಿನಾದಲ್ಲಿ ನೆಲಸಮ ಮಾಡಲಾಗಿದೆ ಎಂದು ಅವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯಲ್ಲಿ ಮತ್ತೊಬ್ಬ ಸಕ್ರಿಯ ಭಯೋತ್ಪಾದಕ ಅಮೀರ್ ನಜೀರ್ ನ ಮನೆಯನ್ನು ಟ್ರೈ ಬಂಡಿಪೋರಾ ಜಿಲ್ಲೆಯಲ್ಲಿ, ಲಷ್ಕರ್ ಎ-ತೋಯ್ದಾ ಅಲ್ಪಾ ಜಮೀಲ್ ಅಹ್ಮದ್ ಶೇರ್ಗೋಜಿಯ ಮನೆಯನ್ನು ನೆಲಸಮ ಮಾಡಲಾಗಿದೆ.
ಶೇರ್ಗೋಜಿ 2016 ರಿಂದ ಸಕ್ರಿಯ ಭಯೋತ್ಪಾದಕರಾಗಿದ್ದಾನೆ ಇದರೊಂದಿಗೆ, ಪಹಲ್ಟಾಮ್ ದಾಳಿಯ ನಂತರ ಕೆಡವಲಾದ ಭಯೋತ್ಪಾದಕರು ಮತ್ತು ಅವರ ಭೂಗತ ಪಾತಕಿಗಳ ಒಟ್ಟು 9 ಮನೆಗಳನ್ನು ಕೆಡವಲಾಗಿದೆ.