Monday, April 28, 2025
Homeರಾಜ್ಯಮಂಗಳೂರು : ಬಯಲಾಯ್ತು ವಾಲಿಬಾಲ್ ಆಟಗಾರ ಸೈಯದ್ ಕಾಮಕಾಂಡ

ಮಂಗಳೂರು : ಬಯಲಾಯ್ತು ವಾಲಿಬಾಲ್ ಆಟಗಾರ ಸೈಯದ್ ಕಾಮಕಾಂಡ

Mangaluru: Volleyball player Syed's sexual misconduct exposed

ಮಂಗಳೂರು, ಏ. 28: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲಾಗಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ವಾಲಿಬಾಲ್ ಆಟಗಾರ ಸೈಯದ್ ಸಿಕ್ಕಿಬಿದ್ದಿರುವ ಕಾಮುಕ.

ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ.

ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸ್ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ. ಸೈಯದ್ ಮೂಲತಃ ಕಾರ್ಕಳ ನಿವಾಸಿ. ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ವಾಲಿಬಾಲ್ ಆಟಗಾರ ಕೂಡ ಹೌದು. ಓರ್ವ ವಿದ್ಯಾರ್ಥಿನಿಗೆ ಸೈಯದ್ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಆತನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ಹಿಂದೂ ಸಂಘಟನೆ ಕಾರ್ಯಕರ್ತರು ಒಂದು ಕ್ಷಣ ಶಾಕ್ ಆಗಿದ್ದಾರೆ. ಏಕೆಂದರೆ ಆತನ ಮೊಬೈಲ್ ತುಂಬಾ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳನ್ನು ಕಂಡು ದಂಗಾಗಿದ್ದಾರೆ. ಇತ್ತ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಸೈಯದ್ ಕೂಡ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಹೀಗಾಗಿ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

RELATED ARTICLES

Latest News