ನವದೆಹಲಿ, ಏ.28- ಬಾಲಿವುಡ್‌ನ ಖ್ಯಾತ ನಟ ಪರೇಶ್ ರಾವಲ್ ಇತ್ತೀಚೆಗೆ ತಮ್ಮ ಮೊಣಕಾಲು ಗಾಯವನ್ನು ಗುಣಪಡಿಸಲು ತಮ್ಮದೇ ಮೂತ್ರಪಾನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ರಾಜ್ ಕುಮಾರ್ ಸಂತೋಷಿ ಅವರ ಘಟಕ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮ್ಮ ತಮ್ಮ ಕಾಲಿಗೆ ಗಾಯವಾಗಿದೆ ಎಂದು ಪರೇಶ್ ರಾವಲ್ ಬಹಿರಂಗಪಡಿಸಿದ್ದಾರೆ.
ಟಿನ್ನು ಆನಂದ್ ಮತ್ತು ಡ್ಯಾನಿ ನನ್ನನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಅಜಯ್ ದೇವಗನ್ ಅವರ ತಂದೆ ಹಾಗೂ ಸಾಹಸ ನಿರ್ದೇಶಕ ವೀರು ದೇವಗನ್ ಆಸ್ಪತ್ರೆಗೆ ಭೇಟಿ ಮಾಡಿ ವೇಗವಾಗಿ ಗುಣಮುಖರಾಗಲು ತಮ್ಮ ಮೂತ್ರವನ್ನು ಸೇವಿಸುವಂತೆ ಸಲಹೆ ನೀಡಿದರು.
ನಾನು ನಾನಾವತಿ ಆಸ್ಪತ್ರೆಯಲ್ಲಿದ್ದಾಗ ವೀರು ದೇವಗನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ನಾನು ಅಲ್ಲಿದ್ದೇನೆ ಎಂದು ತಿಳಿದಾಗ, ಅವರು ನನ್ನ ಬಳಿಗೆ ಬಂದು ನನಗೆ ಏನಾಯಿತು ಎಂದು ಕೇಳಿದರು. ನನ್ನ ಕಾಲಿನ ಗಾಯದ ಬಗ್ಗೆ ನಾನು ಅವನಿಗೆ ಹೇಳಿದೆ.
ಬೆಳಿಗ್ಗೆ ಮೊದಲು ನನ್ನ ಮೂತ್ರವನ್ನು ಕುಡಿಯಲು ಅವರು ನನಗೆ ಹೇಳಿದರು. ಬಹುತೇಕ ಮಂದಿ ಇದನ್ನು ಮಾಡುತ್ತಾರೆ. ನೀವು ಎಂದಿಗೂ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ, ಬೆಳಿಗ್ಗೆ ಮೊದಲು ಮೂತ್ರವನ್ನು ಕುಡಿಯಿರಿ.
ಈ ಸಂದರ್ಭದಲ್ಲಿ ನೀವು ಮದ್ಯ, ಮಟನ್ ಅಥವಾ ತಂಬಾಕು ಸೇವಿಸಬೇಡಿ ಎಂದು ಅವರು ನನಗೆ ಸಲಹೆ ನೀಡಿದ್ದರು. ಅವರ ಸಲಹೆಯನ್ನು ಚಾಚು ತಪ್ಪದೆ ಪಾಲಿಸಿದ ಕಾರಣ ನಾನೀಗ ನನ್ನ ಮೊಣಕಾಲು ಗಾಯದಿಂದ ಗುಣಮುಖನಾಗಿದ್ದೇನೆ ಎಂದು ರಾವಲ್ ಹೇಳಿಕೊಂಡಿದ್ದಾರೆ.