Monday, April 28, 2025
Homeರಾಷ್ಟ್ರೀಯ | Nationalಪಾಕ್‌ ಯೂಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಿದ ಕೇಂದ್ರ ನಿಷೇಧಿಸಿದ ಭಾರತ

ಪಾಕ್‌ ಯೂಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಿದ ಕೇಂದ್ರ ನಿಷೇಧಿಸಿದ ಭಾರತ

Centre blocks 16 Pakistani YouTube channels for anti-India content;

ನವದೆಹಲಿ, ಏ.28- ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ ಮತ್ತು ಭಾರತ, ಅದರ ನೇನೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ ಗಳನ್ನು ನಿರ್ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ಶಿಫಾರಸುಗಳನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಹಲ್ಲಾಮ್ ದುರಂತದ ಬಗ್ಗೆ ತನ್ನ ವರದಿಯಲ್ಲಿ ಭಯೋತ್ಪಾದಕರನ್ನು ಉಗ್ರಗಾಮಿಗಳು ಎಂದು ಕರೆದಿದ್ದಕ್ಕಾಗಿ ಸರ್ಕಾರವು ಬಿಬಿಸಿಗೆ ಔಪಚಾರಿಕ ಪತ್ರವನ್ನು ಕಳುಹಿಸಿದೆ. ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ, ಜಮ್ಮು ಮತ್ತು ಕಾಶ್ಮೀರದ ದುರಂತ ಪಹಲ್ಲಾಮ್ ಭಯೋತ್ಪಾದಕ ಘಟನೆಯ ಹಿನ್ನೆಲೆಯಲ್ಲಿ ಭಾರತ, ಅದರ ಸೇನೆ ಮತ್ತು ಭದ್ರತಾ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಭಾರತ ಸರ್ಕಾರ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, ಸಮಾ ಟಿವಿ, ಎಆವೈರ್ ನ್ಯೂಸ್, ಬೋಲ್ ನ್ಯೂಸ್, ರಾಫ್ತಾರ್. ದಿ ಪಾಕಿಸ್ತಾನ್ ರೆಫರೆನ್ಸ್, ಜಿಯೋ ನ್ಯೂಸ್, ಸಮಾ ಸ್ಪೋರ್ಟ್ಸ್, ಜಿಎನ್‌ಎನ್, ಉಜೈರ್ ಕ್ರಿಕೆಟ್, ಉಮರ್ ಚೀಮಾ ಎಕ್ಯೂಸಿವ್. ಅಸ್ಮಾ ಶಿರಾಜಿ, ಮುನೀಬ್ ಫಾರೂಕ್, ಸುನೋ ನ್ಯೂಸ್ ಮತ್ತು ರಜಿ ನಾಮಾ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ.

RELATED ARTICLES

Latest News