ಶ್ರೀನಗರ, ಏ. 29: ನಮ್ಮ ಮನೆಗಳನ್ನು ನಾಶಮಾಡ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಟಿಆರ್‌ಎಫ್ ಉಗ್ರರು ಭಾರತಕ್ಕೆ ಎಚ್ಚರಿಕೆ ನಿಡಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಅವರೆಲ್ಲರೂ ಹಿಂದೂಗಳ ಮೇಲೆ ದಾಳಿ ನಡೆಸಿದ್ದರು.
ಮೊದಲು ಟಿಆರ್‌ಎಫ್ ಈ ದಾಳಿಯ ಹೊಣೆ ಹೊತ್ತುಕೊಂಡು ನಂತರ ಉಲ್ಟಾ ಹೊಡೆದಿತ್ತು.ಯಾರೋ ನಮ್ಮ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ. ನಮಗೂ ದಾಳಿಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು.ಇದೀಗ ಅದರ ಕಮಾಂಡರ್ ಅಹ್ಮದ್ ಸಲಾರ್ ಅವರ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಕಾಶೀರದಲ್ಲಿ ನಮ ಮನೆಗಳನ್ನು ನಾಶ ಮಾಡುತ್ತಿರುವ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಟಿಅರ್‌ಎಫ್ ಸಂಘಟನೆಯ ಯಾವ ಸದಸ್ಯನೂ ಭಾಗಿಯಾಗಿಲ್ಲ ಎಂಬುದನ್ನ ನಾವು ಸ್ಪಷ್ಟಪಡಿಸುತ್ತೇವೆ. ಆದರೂ ನಮ ಮನೆಗಳನ್ನು ಕೆಡುವುತ್ತಿರುವುದನ್ನು ನೋಡಿಕೊಂಡು ಸುಮನಿರಲು ನಮಿಂದ ಸಾಧ್ಯವಿಲ್ಲ ಎಂದು ಆತ ಗುಡುಗಿದ್ದಾನೆ.