Thursday, May 1, 2025
Homeರಾಷ್ಟ್ರೀಯ | Nationalಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ..?

ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ..?

Key Cabinet meetings at PM Modi's residence conclude

ನವದೆಹಲಿ, ಏ.30-ಇಡೀ ಭಾರತೀಯರ ಅಸಿತೆಯನ್ನು ಬಡಿದೆಬ್ಬಿಸಿರುವ ಜಮು-ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ನರಮೇದಕ್ಕೆ ಪ್ರತೀಕಾರವಾಗಿ ಭಾರತ ನೆರೆಯ ಪಾಕಿಸ್ತಾನದ ವಿರುದ್ಧ ಯಾವುದೇ ಕ್ಷಣದಲ್ಲಿ ಯುದ್ಧ ಇಲ್ಲವೇ ವೈಮಾನಿಕ ದಾಳಿ ನಡೆಸುವ ಸಾಧ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ, ರಾಜಕೀಯ ವ್ಯವಹಾರಗಳ ಸಮಿತಿ, ಆರ್ಥಿಕ ವ್ಯವಹಾರಗಳ ಸಮಿತಿ, ವಿದೇಶಾಂಗ ವ್ಯವಹಾರಗಳ ಸಮಿತಿ. ಹೀಗೆ ಸರಣಿ ಸಭೆಗಳನ್ನು ನಡೆಸಲಾಯಿತು. ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವ ನಿರ್ಣಯವನ್ನು ಮಾಡಿದ್ದಾರೆ.

ಕೇಂದ್ರ ಸಚಿವರಾದ ಅಮಿತ್‌ ಷಾ. ರಾಜನಾಥ್‌ಸಿಂಗ್‌, ನಿರ್ಮಲಾ ಸೀತಾರಾಮನ್‌, ಜೈಶಂಕರ್‌, ಭೂಸೇನೆ, ವಾಯುಸೇನೆ, ನೌಕಾಸೇನೆ, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗುಪ್ತಚರ ಇಲಾಖೆ ಮುಖ್ಯಸ್ಥರು, ಸಂಶೋಧನೆ ಮತ್ತು ವಿಶ್ಲೇಷಣೆಗಳ ಮುಖ್ಯಸ್ಥರು ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ, ಮಿಲಿಟರಿ ಕಾರ್ಯಾಚರಣೆ, ವಾಯುದಾಳಿ, ಇಲ್ಲವೇ ಸರ್ಜಿಕಲ್‌ ದಾಳಿ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಂದು ವೇಳೆ ಪಾಕ್‌ ವಿರುದ್ಧ ಪ್ರತಿಕಾರವಾಗಿ ನಾವು ಯಾವುದೇ ಕಾರ್ಯಾಚರಣೆ ಕೈಗೊಂಡರೂ ಯುದ್ಧ ಸಾಮಗ್ರಿಗಳ ಸಂಗ್ರಹ, ಔಷಧಿಗಳು, ಲಸಿಕೆಗಳು, ತುರ್ತು ಸೇವೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ತುರ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಕರಾವಳಿ ತೀರಪಡೆ, ಸಬ್‌ಮರೀನ್‌ ಯುದ್ಧ ನೌಕೆಗಳು, ಯುದ್ಧ ವಿಮಾನಗಳು ಸೇರಿದಂತೆ ಎಲ್ಲವನ್ನೂ ತಕ್ಷಣವೇ ಸಂಗ್ರಹಿಸಿಕೊಂಡು ನೆರೆಯ ರಾಷ್ಟ್ರಕ್ಕೆ ಮುಟ್ಟಿ ನೋಡಿಕೊಳ್ಳುವ ಪ್ರತಿಕಾರವನ್ನು ನೀಡಬೇಕು. ಯಾವ ಸ್ಥಳದಲ್ಲಿ ದಾಳಿ ನಡೆಸಬೇಕು. ಯಾವಾಗ ನಡೆಸಬೇಕು.

ದಿನಾಂಕ ಮತ್ತು ಸಮಯವನ್ನು ನೀವೇ ನಿಗದಿಪಡಿಸಿ, ಸರ್ಕಾರ ಈ ವಿಚಾರದಲ್ಲಿ ಅನಗತ್ಯವಾಗಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ದೇಶವಾಸಿಗಳು ಬಯಸಿದಂತೆ ಸಕಾರಾತಕವಾದ ಫಲಿತಾಂಶವನ್ನು ಸೇನೆಯಿಂದ ನಾವು ನಿರೀಕ್ಷೆ ಮಾಡುತ್ತೇವೆ ಎಂದು ಪ್ರಧಾನಿ ಸೇನಾ ಮುಖ್ಯಸ್ಥರಿಗೆ ಧೈರ್ಯ ತುಂಬಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೂರು ಸೇನಾ ಪಡೆಗಳ ಮುಖ್ಯಸ್ಥರು, ಕರಾವಳಿ, ವಾಯು ಹಾಗೂ ಭೂ ಪ್ರದೇಶ ಸೇರಿದಂತೆ ಪಾಕಿಸ್ತಾವನ್ನು ಬಗ್ಗು ಬಡಿಯುವುದು ನಮಗೆ ದುಃಸ್ಸಾಹಸವಲ್ಲ. ಕರಾಚಿ ತೀರ ಪ್ರದೇಶವನ್ನು ತಲುಪುವಂತಹ ಕ್ಷಿಪಣಿಗಳು ನಮ ಬಳಿ ಇವೆ. ಸರ್ಕಾರ ಬಯಸಿದಂತೆ ಈ ಬಾರಿ ಅವರನ್ನು ಹಿಮೆಟ್ಟಿಸುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.

RELATED ARTICLES

Latest News