ಬೆಂಗಳೂರು,ಏ.30- ನೈಜೀರಿಯಾ ದೇಶದ ಮಹಿಳೆ ಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 30 ವರ್ಷದ ನೈಜೀರಿಯಾ ಮಹಿಳೆಯ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.
ಚಿಕ್ಕಜಾಲದ ತರಹುಣಸೆಯ ಚಪ್ಪರಕಲ್ಲು ರಸ್ತೆಯ ತೇರಾಾರಂ ಸಮೀಪ ಜಮೀನೊಂದರ ಮರದ ಕೆಳಗೆ ಈ ಮಹಿಳೆಯ ಶವ ಪತ್ತೆಯಾಗಿದೆ.ದುಷ್ಕರ್ಮಿಗಳು ಈ ಮಹಿಳೆಯ ತಲೆಗೆ ಯಾವುದೋ ಆಯುಧದಿಂದ ಹೊಡೆದು ಬೇರಡೆ ಕೊಲೆ ಮಾಡಿ ಈ ಜಾಗದಲ್ಲಿ ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗ್ಗೆ ಮಹಿಳೆಯ ಶವ ನೋಡಿದ ಸಾರ್ವಜನಿಕ ರೊಬ್ಬರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದು ಚಿಕ್ಕಜಾಲ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಈ ಮಹಿಳೆ ನೈಜೀರಿಯಾದವರೆಂದು ಗೊತ್ತಾಗಿದೆ.
ಈ ಮಹಿಳೆ ಯಾರು, ಯಾವ ವೀಸಾದಡಿ ಯಾವ ಅವಧಿಯಲ್ಲಿ ಭಾರತಕ್ಕೆ ಬಂದಿದ್ದರು, ಎಲ್ಲಿ ವಾಸವಿದ್ದರು ದುಷ್ಕರ್ಮಿಗಳು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.