ಮೈಸೂರು, ಮೇ.1-ಪಹಲ್ಲಾಮ್ ನಲ್ಲಿ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಾಕ್ ವಿರುದ್ಧ ಪ್ರಧಾನಿ ಮೋದಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ ಪಾಕ್‌ಗೆ ನುಗ್ಗಿ ಹೊಡಿಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕಾರ್ಮಿಕ ಸಚಿವ ಸಂತೋಪ್ ಲಾಡ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಇಂದಿರಾ ಗಾಂಧಿ ಮಂಡಿಯೂರಿ ಕೂರುವಂತೆ ಮಾಡಿದ್ದರು. 1971 ರಲ್ಲಿ ಯುದ್ಧದ ಸಂದರ್ಭದಲ್ಲಿ ಯಾವ ರೀತಿ ಕ್ರಮ ಆಗಿತ್ತು ನೆನಪಿಸಬೇಕು. ಅದೇ ರೀತಿ ಈಗಲೂ ಮಾಡಲಿ. ಪ್ರಧಾನಿ ಮೋದಿ ಯಾವುದೇ ನಿರ್ಧಾರ ಕೈಗೊಂಡರೂ ನಾವು ಸ್ವಾಗತ ಮಾಡುತ್ತೇವೆ ಎಂದರು.
ಯಾರೇ ಪಾಕ್ ಪರ ಘೋಷಣೆ ಕೂಗಿದ್ರೂ ಶಿಕ್ಷೆ ಆಗಲಿ ಮಂಗಳೂರಿನಲ್ಲಿ ಪಾಕ್ ಪರ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್. ಅದಕ್ಕೆ ಕಾನೂನು ಪ್ರಕಾರ ಕ್ರಮ ಆಗತ್ತೆ. ಯಾರು ಘೋಷಣೆ ಕೂಗಿದ್ದಾರೆ ಅವರನ್ನು ಯಾರು ಸಪೋರ್ಟ್ ಮಾಡಲ್ಲ. ಯಾರೇ ಪಾಕ್ ಪರ ಘೋಷಣೆ ಕೂಗಿದರೂ ಶಿಕ್ಷೆ ಆಗಲಿ.
ನನ್ನ ಕುಟುಂಬದವರು ಆದರೂ ಪರವಾಗಿಲ್ಲ ಶಿಕ್ಷೆ ಆಗಲಿ. ಇಂತಹ ಘಟನೆಗಳು ಯಾಕೆ ಜಾಸ್ತಿಯಾಗುತ್ತಿದೆ. ಯಾಕೆ ಘೋಷಣೆ ಕೂಗುತ್ತಿದ್ದಾರೆ ಗೊತ್ತಿಲ್ಲ. ನಾವಂತೂ ಘೋಷಣೆ ಕೂಗುವವರ ಪರವಿಲ್ಲ.
ದೇಶದ ನಾನಾ ಭಾಗಗಳಲ್ಲೂ ಇತರ ಘಟನೆಗಳು ನಡೆದಿವೆ. ಯಾಕೆ ನಡೆಯುತ್ತಿದೆ ಅನ್ನೋದಕ್ಕೆ ನಾನು ಹೊಣೆಗಾರ ಅಲ್ಲ. ಅದಕ್ಕೆ ನಾನು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ಪ್ರಶ್ನಿಸಿದರು.