Thursday, May 1, 2025
Homeರಾಜ್ಯಡಿ.ಕೆ.ಸುರೇಶ್‌ ಪತ್ನಿ ಎಂದು ಹೇಳಿಕೊಂಡ ಮಹಿಳೆಯ ವಿಡಿಯೋ ವೈರಲ್‌

ಡಿ.ಕೆ.ಸುರೇಶ್‌ ಪತ್ನಿ ಎಂದು ಹೇಳಿಕೊಂಡ ಮಹಿಳೆಯ ವಿಡಿಯೋ ವೈರಲ್‌

Video of woman claiming to be D.K. Suresh's wife goes viral

ಬೆಂಗಳೂರು, ಮೇ 1- ರಾಮನಗರ ಜಿಲ್ಲೆಯ ಮಹಿಳೆಯೊಬ್ಬರು ತಮನ್ನು ತಾವು ಪದೇ ಪದೇ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರ ಪತ್ನಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿ ಬಿಡುತ್ತಿರುವುದು ವೈರಲ್‌ ಆಗುತ್ತಿದೆ.

ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ತಮ ಹೆಸರನ್ನು ಪವಿತ್ರ ಎಂದು ಉಲ್ಲೇಖಿಸಿದ್ದು, ಬಯೋದಲ್ಲಿ ಪವಿತ್ರ ಡಿ.ಕೆ.ಸುರೇಶ್‌ ದೊಡ್ಡ ಆಲನಹಳ್ಳಿ ಎಂದು ಬರೆದುಕೊಂಡಿದ್ದಾರೆ. ಫ್ಯಾಷನ್‌ ಮಾಡೇಲ್‌ ಡಿಕೆಸುರೇಶ್‌ ಕಂಪೆನಿ ಎಂಡಿ ಎಂದೆಲ್ಲಾ ಅನರ್ಥವಾಗಿ ಬರೆದುಕೊಂಡಿರುವುದು ಕಂಡು ಬಂದಿದೆ.

ಒಮೆ ಎಲೆಕ್ಷನ್‌ ಇ-ಎಲೆಕ್ಟ್ರೋಲ್‌ ಫೋಟೋ ಐಡಿ ಕಾರ್ಡ್‌ ಎಂದು ಒಂದು ಪೋಸ್ಟ್‌ ಹಾಕಿದ್ದು, ಅದರಲ್ಲಿ ಹೆಸರನ್ನು ಪವಿತ್ರ ಹೆಚ್‌.ಎನ್‌., ಗಂಡನ ಹೆಸರು ಡಿ.ಕೆ.ಸುರೇಶ್‌ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಕಾರ್ಡ್‌ನ ಅಸಲಿಯತ್ತು ಅನುಮಾನ ಮೂಡಿಸುವಂತಿದೆ.
ಮಹಿಳೆ ತಮ ಇನ್ಸಟಾಗ್ರಾಮನಲ್ಲಿ ಪ್ರತಿ ದಿನ ಒಂದೊಂದು ವಿಡಿಯೋವನ್ನು ಹರಿಯ ಬಿಡುತ್ತಿರುವ ಆಕೆ, ತಮ ಭಾವ ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹಲವಾರು ತಿಂಗಳಿನಿಂದಲೂ ಆಕೆ ಪೋಸ್ಟ್‌ ಮಾಡುವ ಪ್ರತಿಯೊಂದು ವಿಡಿಯೋದಲ್ಲಿ ಯಾವುದಾದರೂ ಒಂದು ರೂಪದಲ್ಲಿ ತಮ ಪತಿ ಡಿ.ಕೆ.ಸುರೇಶ್‌ ಎಂದು ಉಲ್ಲೇಖ ಮಾಡಿಮಾಡುತ್ತಾರೆ. ಅವರಿಗೂ ನಾನು ಫೋಟೋ ಶೇರ್‌ ಮಾಡುವುದು ಇಷ್ಟ, ಅವರು ಒಳ್ಳೆಯ ಕೆಲಸ ಮಾಡಿದಾಗ ನಾನು ಅವರ ಫೋಟೋ ಪೋಸ್ಟ್‌ ಮಾಡುತ್ತೇನೆ.

ಮೂರು ಬಾರಿ ಸಂಸದರಾಗಿ ತುಂಬಾ ಉತ್ತಮ ಕೆಲಸ ಮಾಡಿದ್ದಾರೆ. ನಾನು ಅವರಿಗೆ ಯಾವುದಕ್ಕೂ ಕಟ್ಟುಪಾಡು ವಿಧಿಸುವುದಿಲ್ಲ, ಅವರು ಅವರ ಕೆಲವನ್ನು ಮಾಡಿಕೊಳ್ಳಲು ಬಿಟ್ಟು ಬಿಡುತ್ತೇನೆ. ಮೊದಲು ನಾನು ಅವರಿಗೆ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

ಡಿ.ಕೆ.ಸುರೇಶ್‌ ಅವರು ಅತ್ಯಂತ ಸಕ್ರಿಯ ವ್ಯಕ್ತಿ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ತಮನ್ನು ತಾವು ಸರ್ಕಾರಿ ನೌಕರರು ಎಂದು ಹೇಳಿಕೊಂಡಿರುವ ಮಹಿಳೆ, ನನ್ನ ಗಂಡ ಸಮರ್ಥ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್‌್ಸ ಟಾಗ್ರಾಮ್‌ ನಲ್ಲಿ ಪೋಸ್ಟ್‌ ಗಳಲ್ಲಿ ತಮ ಫೋಟೋ ಹಾಕಿಕೊಂಡು, ಪೋಲಿಟಿಷಿಯನ್‌ ಎಂದು ಬರೆದುಕೊಳ್ಳುತ್ತಾರೆ.

ಕೆಲ ವಿಡಿಯೋಗಳಲ್ಲಿ ತಾನು ಸರ್ಕಾರಿ ನೌಕರೆ ಎಂದು ಹೇಳಿಕೊಂಡಿದ್ದಾರೆ. ಮಹಿಳೆ ಈ ರೀತಿ ಪೋಸ್ಟ್‌ ಹಾಕುತ್ತಿರುವ ಕುರಿತು ವಕಿಲರೊಬ್ಬರು ದೂರು ನೀಡಿದ್ದಾರೆ. ಆದರೂ ಆಕೆ ತಮ ಪೋಸ್ಟ್‌ ಹಾಕುವುದನ್ನು ಮುಂದುವರೆಸಿದ್ದಾರೆ.

RELATED ARTICLES

Latest News