ಬೆಂಗಳೂರು,ಮೇ.1- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಯಯ ಸೆನೆಟ್ ಸದಸ್ಯರ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಿರುವ ಸಾಧ್ಯತೆ ಇರುವುದರಿಂದ ತನಿಖೆ ನಡೆಸಲು ರಾಜ್ಯಪಾಲರು ಆದೇಶಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಲೋಪ ಉಂಟಾಗಿದ್ದು ಇದರ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ವಿಶ್ವವಿದ್ಯಾಯದ ಕುಲಾಧಿಪತಿಗಳು ಆದ ರಾಜ್ಯಪಾಲರು ತನಿಖೆ ನಡೆಸಿ ವರದಿ ಬರುವವರೆಗೂ ಚುನಾಯಿತ ಸದಸ್ಯರು ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ ,ವಿವಿ ಆಡಳಿತದಲ್ಲಿ ಮುಂದಿನ ಆದೇಶದವರೆಗೂ ಹಸ್ತಕ್ಷೇಪ ಮಾಡುವಂತಿಲ್ಲ,
ಸೆನೆಟ್‌ಗೆ ಆಯ್ಕೆಯಾದ್ದ ಡಾ. ಶ್ರೀನಿವಾಸ್ , ಡಾ. ಕೋನರಡ್ಡಿ, ಡಾ. ನವೀನ್ ,ವೈಶಾಲಿ ಶ್ರೀಜಿತ್,ಡಾ. ಶಶಿಕುಮಾರ್ ಅವರಿಗೆ ಸದ್ಯ ಯಾವುದೇ ಕರ್ತವ್ಯಗಳು, ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 10ನೇ ಸೆನೆಟ್‌ಗೆ 2024-27ರವರೆಗೆ ಸದಸ್ಯರ ಆಯ್ಕೆಗೆ ಕಳೆದ 2024 ಡಿ.10 ರಂದು ಚುನಾವಣೆ ನಡೆದಿತ್ತು.