ಮನಿಲಾ, ಮೇ 4: ಮನಿಲಾ ವಿಮಾನ ನಿಲ್ದಾಣದ ಪ್ರವೇಶದ್ವಾರಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಫಿಲಿಪೈನ್ಸ್ ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ.
ಇನ್ನೊಬ್ಬ ಬಲಿಪಶು ವಯಸ್ಕ ಪುರುಷ ಎಂದು ಮಾನವೀಯ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಇತರ ಹಲವು ಜನರು ಗಾಯಗೊಂಡಿದ್ದಾರೆ ಮತ್ತು ವಾಹನದ ಚಾಲಕ ಪೊಲೀಸ್ ವಶದಲ್ಲಿದ್ದಾನೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ನಿನೋಯ್ ಅಶ್ವಿನೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶದ್ವಾರದ ಗೋಡೆಗೆ ಡಿಕ್ಕಿ ಹೊಡೆದ ಕಪ್ಪು ಎಸ್ ಯುವಿಯನ್ನು ಸುತ್ತುವರೆದಿದ್ದ ಡಜನ್ ಗಟ್ಟಲೆ ಸಿಬ್ಬಂದಿಗಳು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ನಂತರ ವಾಹನವನ್ನು ಸ್ಥಳದಿಂದ ತೆಗೆದುಹಾಕಲಾಯಿತು. ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ವಿಮಾನ ನಿಲ್ದಾಣದ ಆಪರೇಟರ್ ತಿಳಿಸಿದ್ದಾರೆ.
- ಹಿಂದೂ ಧರ್ಮದಿಂದಲೇ ರಾಹುಲ್ಗಾಂಧಿ ಉಚ್ಛಾಟನೆ : ಅವಿಮುಕ್ತೇಶ್ವರಾನಂದ ಶ್ರೀ ಘೋಷಣೆ
- ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ
- ಮುಸ್ಲಿಂ ಮುಖಂಡರ ಧಮ್ಕಿಗೆ ಹೆದರಿದರೇ ಗೃಹಸಚಿವರು..?
- ಬೆಂಗಳೂರಿಗರೇ, ನಿಮ್ಮ ಕೈಯಲ್ಲಿರುವ ಮೊಬೈಲ್ ಹುಷಾರ್..!
- ಪದಶ್ರೀ ಪ್ರಶಸ್ತಿ ಪುರಸ್ಕೃತ 128 ವರ್ಷದ ಬಾಬಾ ನಿಧನ