Sunday, May 4, 2025
Homeಬೆಂಗಳೂರುಬೆಂಗಳೂರಿಗರೇ, ನಿಮ್ಮ ಕೈಯಲ್ಲಿರುವ ಮೊಬೈಲ್‌ ಹುಷಾರ್‌..!

ಬೆಂಗಳೂರಿಗರೇ, ನಿಮ್ಮ ಕೈಯಲ್ಲಿರುವ ಮೊಬೈಲ್‌ ಹುಷಾರ್‌..!

mobile snatching cases in Bengaluru

ಬೆಂಗಳೂರು,ಮೇ 4-ಪ್ರತಿ ದಿನ ನಗರದ ಒಂದಲ್ಲಾ ಒಂದು ಕಡೆ ಮೊಬೈಲ್‌ ದರೊಡೆಗಳು ನಡೆಯುತ್ತಿವೆ. ಕಳೆದ ರಾತ್ರಿ ನಗರದ ಐದು ಕಡೆಗಳಲ್ಲಿ ಸರಣಿ ಮೊಬೈಲ್‌ ದರೊಡೆಗಳ ಪ್ರಕರಣಗಳು ನಡೆದಿವೆ.

ವಿಲ್ಸನ್‌ ಗಾರ್ಡನ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 2.30 ರ ಸಮಯದಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದರೊಡೆಕೋರರು ಅವರ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದೇ ರೀತಿ ಮಹಾಲಕ್ಷ್ಮಿ ಲೇಔಟ್‌, ಆಡುಗೋಡಿ, ಬ್ಯಾಟರಾಯನಪುರ,ಪುಲಕೇಶಿನಗರ ಪೊಲೀಸ್‌‍ ಠಾಣೆಗಳ ವ್ಯಾಪ್ತಿಗಳಲ್ಲಿ ದರೊಡೆಕೋರರು ವ್ಯಕ್ತಿಗಳಿಂದ ಮೊಬೈಲ್‌ಗಳನ್ನು ಕಸಿದುಕೊಂಡು ಹೋಗಿದ್ದಾರೆ.

ಸುದ್ದಿ ತಿಳಿದ ನಗರ ಪೊಲೀಸರು ರಾತ್ರಿಯಿಂದ ಮುಂಜಾನೆವರೆಗೂ ನಗರದಾದ್ಯಂತ ನಾಕಾಬಂಧಿ ಮಾಡಿ ದರೊಡೆಕೋರರಿಗಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.ದರೊಡೆಕೋರರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ.

ಮೊಬೈಲ್‌ಗಳು ದರೊಡೆಯಾದ ಸಂದರ್ಭದಲ್ಲಿ ಬಹುತೇಕ ಮಂದಿ ಪೊಲೀಸ್‌‍ ಠಾಣೆಗೆ ದೂರು ನೀಡುವುದಿಲ್ಲಘಿ. ಅವರುಗಳು ಠಾಣೆಗೆ ಬಂದು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್‌‍ ಅ ಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಜೆಗೆ ಮಾತನಾಡುತ್ತಿದ್ದ ಅವರು ಮೊಬೈಲ್‌ ಕಳೆದುಕೊಂಡವರು ಅಥವಾ ದರೊಡೆಗೆ ಒಳಗಾದವರು ತಕ್ಷಣ ಪೊಲೀಸ್‌‍ ಠಾಣೆಗೆ ದೂರು ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

RELATED ARTICLES

Latest News