ಸುಲ್ತಾನಪುರ, ಮೇ 8-ಗುಡುಗು ಸಹಿತ ಮಳೆಯ ಸಮಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಲಕ್ಷ್ಮೀ-ಬಲ್ಲಿಯಾ ಹೆದ್ದಾರಿಯ ರಾಂಪುರ ಪ್ರದೇಶದ ಧಾಬಾ ಬಳಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದ್ದು, ಬಿರುಗಾಳಿಯಿಂದಾಗಿ ಮರ ಬಿದ್ದು ಆ ಪ್ರದೇಶದಲ್ಲಿ ಹಾದುಹೋಗುತ್ತಿದ್ದ ಕಾರು ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರನ್ನು ಚಲಾಯಿಸುತ್ತಿದ್ದ ಜಿತೇಂದ್ರ ವರ್ಮಾ (42) ಮತ್ತು ಜೊತೆಗಿದ್ದ ಓಂ ಪ್ರಕಾಶ್ ವರ್ಮಾ (45) ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕೆ ಧಾವಿಸಿ ಬುಲ್ಲೋಜರ್ ಸಹಾಯದಿಂದ ಮರವನ್ನು ತೆಗೆಯಲಾಗಿದೆ.ಶವಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.