ಲಾಹೋರ್, ಮೇ.8-ಪಾಕಿಸ್ತಾನದ ಲಾಹೋರ್‌ನಲ್ಲಿ ಇಂದು ಬೆಳಿಗ್ಗೆ ಹಲವೆಡೆ ಬಾಂಬ್ ಸ್ಫೋಟಗೊಂಡಿದೆ. ಸ್ಪೋಟದ ಸದ್ದು ದೂರದವರೆಗೂ ಕೇಳಿಸಿದ್ದು ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ .
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‌ನಲ್ಲಿ 3 ಕಡೆ ಸ್ಫೋಟ ಸಂಭವಿಸಿದೆ. ಲಾಹೋರ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.ಅದರ ಸಮೀಪವೇ ಸ್ಫೋಟ ಸಂಭವಿಸಿದ್ದು
ದಟ್ಟ ಹೊಗೆ ಆವರಿಸಿರುವುದನ್ನು ಅಂತರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಸ್ಥಳದಲ್ಲಿ ಅಸ್ಥವಸ್ಥೆ ಉಂಟಾಗಿದ್ದು, ಅಗ್ನಿ ಶಾಮಕ ದಳ ಹಾಗು ಭದ್ರತಾ ಸಿಬ್ಬಂಧಿ ಸ್ಥಳಕ್ಕೆ ದಾವಿಸಿದ್ದಾರೆ.