ನವದೆಹಲಿ,ಮೇ.9-ಜಮ್ಮು ಮತ್ತು ಕಾಶ್ಮೀರದ ರಜೋರಿಯಲ್ಲಿ ಸೇನಾ ಬ್ರಿಗೇಡ್ ಮೇಲೆ ಆತ್ಮಹತ್ಯಾ ದಾಳಿ ಮತ್ತು ಪಂಜಾಬ್‌ನ ಜಲಂಧರ್ ನಲ್ಲಿ ಡೋನ್ ದಾಳಿಯ ಬಗ್ಗೆ ಕೆಲವು ಸಾಮಾಜಿಕ ಮಾಧ್ಯಮ ನಕಲಿ ಸುದ್ದಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾವುದೇ ಸೇನಾ ಕಂಟೋನ್ವೆಂಟ್‌ನಲ್ಲಿ ಯಾವುದೇ ಫಿದಾಯೀನ್ ಅಥವಾ ಆತ್ಮಹತ್ಯಾ ದಾಳಿ ನಡೆದಿಲ್ಲ ಪಿಐಬಿ ತಿಳಿಸಿದೆ ಮತ್ತು ಸುದ್ದಿಯನ್ನು ತಳ್ಳಿಹಾಕಿದೆ. ಜಲಂಧರ್‌ನಲ್ಲಿ ಡೋನ್ ದಾಳಿಯ ವೀಡಿಯೊ ಎಂದು ಹೇಳಿಕೊಳ್ಳುವ ವೀಡಿಯೊವು ಜಮೀನೊಂದರಲ್ಲಿ ಬೆಂಕಿಗೆ ಹಚ್ಚಿರುವುದು ಎಂದು
ಜಲಂಧರ್ ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ ಎಂದು ಪಿಐಬಿ ತಿಳಿಸಿದೆ.
ಕಳೆದ ರಾತ್ರಿ 10 ಗಂಟೆಗಳಿಂದ ಮೇ 9 ರಂದು ಬೆಳಿಗ್ಗೆ 6:30ರ ನಡುವೆ ಒಟ್ಟು ಏಳು ವೀಡಿಯೊಗಳನ್ನು ಸತ್ಯ- ಪರಿಶೀಲಿಸಲಾಗಿದೆ ಎಂದು ಹೇಳಿದೆ. ಭಾರತದ ಮೇಲೆ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಯದ್ದು ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಳೆಯ ವೀಡಿಯೊ ವಾಸ್ತವವಾಗಿ 2020 ರಲ್ಲಿ ಲೆಬನಾನ್‌ನ ಬೈರುತ್ ನಲ್ಲಿ ನಡೆದ ಸ್ಫೋಟಕ ದಾಳಿಯದ್ದಾಗಿತ್ತು ಎಂದು ತಿಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಸೇನಾ ನೆಲೆಯನ್ನು ನಾಶಪಡಿಸಿವೆ ಎಂದು ಹೇಳಿಕೊಳ್ಳುವ ವೀಡಿಯೊವು ಕಟ್ಟುಕಥೆ, ಸಾಮಾನ್ಯವಾಗಿ ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ವಿಶೇಷವಾಗಿ ಪಾಕಿಸ್ತಾನದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಭಾರತೀಯ ಜನರಲ್ಲಿ ಭಯ ಹುಟ್ಟಿಸುವ ಏಕೈಕ ಉದ್ದೇಶದಿಂದ ಸಂಘಟಿತ ತಪ್ಪು ಮಾಹಿತಿಯ ದಾಳಿಯನ್ನು ನಡೆಸಿವೆ ಎಂದು ಪಿಐಬಿ ಹೇಳಿಕೆ ತಿಳಿಸಿದೆ.
ಅಸ್ತಿತ್ವದಲ್ಲಿಲ್ಲದ ಸೇನಾ ಮುಖ್ಯಸ್ಥ ಜನರಲ್ ವಿ ಕೆ ನಾರಾಯಣ್ ಅವರ ನಕಲಿ ಪತ್ರವೂ ಕಾಣಿಸಿಕೊಂಡಿದ್ದು, ಅದನ್ನು ಸತ್ಯವಲ್ಲ ಎಂದು ಪಿಐಬಿ ದೃಢಪಡಿಸಿದೆ. ತಪ್ಪು ಮಾಹಿತಿಯನ್ನು ಎದುರಿಸಲು ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಕಾಪಾಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಪಿಐಬಿ ನಾಗರಿಕರು ಪರಿಶೀಲಿಸಿದ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಮತ್ತು ಯಾವುದೇ ಪರಿಶೀಲಿಸದ ವಿಷಯವನ್ನು ಹಂಚಿಕೊಳ್ಳುವುದನ್ನು ತಡೆಯಬೇಕು ಎಂದು ಒತ್ತಾಯಿಸಿದೆ.