Saturday, May 10, 2025
Homeರಾಷ್ಟ್ರೀಯ | Nationalಭಾರತ -ಪಾಕ್ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಜಿ7 ದೇಶಗಳು ಒತ್ತಾಯ

ಭಾರತ -ಪಾಕ್ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಜಿ7 ದೇಶಗಳು ಒತ್ತಾಯ

G7 Countries call for ‘immediate de-escalation’ in India-Pakistan conflict

ನವದೆಹಲಿ, ಮೇ.10-ಭಾರತ ಮತ್ತು ಪಾಕಿಸ್ತಾನ ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳುವಂತೆ ಜರಾಷ್ಟ್ರಗಳು ಒತ್ತಾಯಿಸಿದೆ. ಮಿಲಿಟರಿ ಸಂಘರ್ಷದ ಉಲ್ಬಣವನ್ನು ತಕ್ಷಣವೇ ಕಡಿಮೆ ಮಾಡಲು ಕರೆ ನೀಡಿದೆ.

ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದಾಗಿ ಮತ್ತು ತ್ವರಿತ ಮತ್ತು ಶಾಶ್ವತ ರಾಜತಾಂತ್ರಿಕ ಪರಿಹಾರಕ್ಕಾಗಿ ನಮ್ಮ ಬೆಂಬಲವನ್ನು ವ್ಯಕ್ತಪಡಿಸುವುದಾಗಿ ಜಿ7 ಹೇಳಿದೆ.

ಕೆನಡಾ, ಫ್ರಾನ್ಸ್‌ ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್‌ನ ಜಿ7 ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳು ಏಪ್ರಿಲ್ 22 ರಂದು ಪಹಲ್ಯಾಮ್‌ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಭಾರತ ಮತ್ತು ಪಾಕಿಸ್ತಾನ ಎರಡರಿಂದಲೂ ಗರಿಷ್ಠ ಸಂಯಮವನ್ನು ಕೋರುತ್ತೇವೆ ಎಂದು ಗುಂಪು ಹೇಳಿಕೆಯಲ್ಲಿ ತಿಳಿಸಿದೆ.

ಎರಡೂ ಕಡೆಯ ನಾಗರಿಕರ ಸುರಕ್ಷತೆಯ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ ಎಂದು ಆದು ಹೇಳಿದೆ. ನಾವು ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡುತ್ತೇವೆ ಮತ್ತು ಶಾಂತಿಯುತ ಫಲಿತಾಂಶಕ್ಕಾಗಿ ಎರಡೂ ದೇಶಗಳು ನೇರ ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದೆ.

RELATED ARTICLES

Latest News