ಹೈದರಾಬಾದ್, ಮೇ 10- ದೇಶ ಮತ್ತೆ ಕರೆದರೆ ಯುದ್ಧ ಕರ್ತವ್ಯಕ್ಕೆ ಮರಳುವ ಸಿದ್ದ ಎಂದು ಭಾರತೀಯ ವಾಯುಪಡೆಯ ಮಾಜಿ ಪೈಲಟ್ ಹಾಗು ತೆಲಂಗಾಣ ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಇಲ್ಲಿನ ಗಾಂಧಿ ಭವನದಲ್ಲಿ ವರದಿಗಾರರೊಂದಿಗೆ ಮಾತನಾಡಿದ ನೀರಾವರಿ ಮತ್ತು ನಾಗರಿಕ ಸರಬರಾಜು ಸಚಿವ ರೆಡ್ಡಿ, ಭಾರತೀಯ ಸೇನೆಯನ್ನು ಸಾಧನೆಗೆ ಹೆಮ್ಮೆ ಪಟ್ಟರು.
1982 ರ ಹೊತ್ತಿಗೆ 16 ನೇ ವಯಸ್ಸಿನಲ್ಲಿ ಸಶಸ್ತ್ರ ಪಡೆಗಳಿಗೆ ಸೇರಿ 20ರ ವೇಳೆಗೆ ಫೈಟರ್ ಪೈಲಟ್ ಆಗಿದೆ.
ಮಿಗ್ -21 ವಿಮಾನಗಳನ್ನು ಹಾರಿಸಿದ್ದೆ ನಂತರ ಮಿಗ್ -23 ಹಾರಾಟದಲ್ಲಿ ಪರಿಣಿತಿ ಪಡೆದಿದ್ದೆ ಈಗಲು ನನ್ನಲ್ಲಿ ಬಲವಿದೆ ಎಂದರು. ವಹಲ್ಯಾಮ್ ಭಯೋತ್ಪಾದಕ ದಾಳಿ ಖಂಡಿಸಿ ಅವರು ಇದಕ್ಕೆ ಪಾಕಿಸ್ತಾನ ಬೆಂಬಲಿಸಿದೆ. ಭಾರತವು ಪ್ರತಿದಾಳಿ ನಡೆಸಲು ಎಲ್ಲ ಕಾರಣಗಳಿವೆ ಎಂದು ಅವರು ಹೇಳಿದರು, ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸಾಧಿಸಲು ಭಾರತಕ್ಕೆ ಇದು ನಿರ್ಣಾಯಕವಾಗಿವೆ.
ವೈಯಕ್ತಿಕವಾಗಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವವರೆಗೆ ಕಾಶ್ಮೀರ ಸಂಘರ್ಷ ನಿಜವಾಗಿಯೂ ಕೊನೆಗೊಳ್ಳುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು. ಪೂರ್ಣ ಪ್ರಮಾಣದ ಸಂಘರ್ಷ ಉಂಟಾದರೆ ಮತ್ತು ನನ್ನ ಅಗತ್ಯವಿದ್ದರೆ, ನಾನು ಮತ್ತೆ ಹೋರಾಡುತ್ತೇನೆ ಎಂದು ಹೇಳಿದರು.