Saturday, May 10, 2025
Homeರಾಷ್ಟ್ರೀಯ | Nationalಗಡಿಯಲ್ಲಿ ಪಾಕ್‌ನ ಭಯೋತ್ಪಾದಕ ಲಾಂಚ್ ಪ್ಯಾಡ್ ಧ್ವಂಸಗೊಳಿಸಿದ ಬಿಎಸ್ಎಫ್

ಗಡಿಯಲ್ಲಿ ಪಾಕ್‌ನ ಭಯೋತ್ಪಾದಕ ಲಾಂಚ್ ಪ್ಯಾಡ್ ಧ್ವಂಸಗೊಳಿಸಿದ ಬಿಎಸ್ಎಫ್

BSF completely destroys terrorist launch pad at Looni in Pakistan's Sialkot

ನವದೆಹಲಿ, ಮೇ10- ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಕ್ರಿಯೆಯಾಗಿ ಜಮ್ಮುವಿನ ಅಣ್ಣೂರ್ ಎದುರಿನ ಭಯೋತ್ಪಾದಕ ಲಾಂಚ್ ಪ್ಯಾಡ್ ಅನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಶನಿವಾರ ತಿಳಿಸಿದೆ.

ಪಾಕಿಸ್ತಾನದ ಸಿಯಾಲ್‌ಟ್ ಜಿಲ್ಲೆಯ ಲೂನಿಯಲ್ಲಿ ಈ ನೆಲೆ ಇತ್ತು ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ. ಜಮ್ಮು ವಲಯದಲ್ಲಿರುವ ಬಿಎಸ್ ಎಫ್ ನೆಲೆಗಳ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ ಬಿಎಸ್‌ಎಫ್ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ.

ಇದರಿಂದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ರೇಂಜರ್‌ಗಳ ಪೋಸ್ಟ್‌ಗಳು ಮತ್ತು ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ ನಮ್ಮ ಸಂಕಲ್ಪ ಅಚಲವಾಗಿದೆ ಎಂದು ವಕ್ತಾರರು ಹೇಳಿದರು.

RELATED ARTICLES

Latest News