Tuesday, May 13, 2025
Homeರಾಷ್ಟ್ರೀಯ | Nationalಬಂದ್ ಮಾಡಲ್ಪಟ್ಟಿದ್ದ 32 ವಿಮಾನ ನಿಲ್ದಾಣಗಳು ಮತ್ತೆ ಓಪನ್

ಬಂದ್ ಮಾಡಲ್ಪಟ್ಟಿದ್ದ 32 ವಿಮಾನ ನಿಲ್ದಾಣಗಳು ಮತ್ತೆ ಓಪನ್

32 Airports closed for flights now open after India-Pakistan ceasefire

ನವದೆಹಲಿ, ಮೇ 12– ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಮುಚ್ಚಲ್ಪಟ್ಟಿದ್ದ ದೇಶದ 32 ವಿಮಾನ ನಿಲ್ದಾಣಗಳು ಮತ್ತೆ ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಿವೆ. 32 ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಭಾರತೀಯ ವಾಯುಪಡೆ ಅಧಿಕಾರಿಗಳು ಸೂಚನೆ ನೀಡಿದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಇಂತಹ ಸೂಚನೆ ನೀಡಿದೆ.

ಹೀಗಾಗಿ ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ ಮಾಡಲಿವೆ. ಇತ್ತೀಚೆಗೆ ಭಾರತ ಪಾಕ್ ನಡುವಿನ ಸಂಘರ್ಷ ತೀವ್ರಗೊಂಡಿತ್ತು. ಈ ಹಿನ್ನೆಲೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 32 ವಿಮಾನ ನಿಲ್ದಾಣಗಳನ್ನು ಮೇ 15ರ ವರೆಗೆ ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸೂಚಿಸಿತ್ತು.

ಪಂಜಾಬ್‌ನ ಅಮೃತಸರ, ಲುಧಿಯಾನ, ಪಟಿಯಾಲ, ಬಟಿಂಡಾ, ಹಲ್ವಾರಾ ಮತ್ತು ಪಠಾಣ್‌ ಕೋಟ್, ಹಿಮಾಚಲ ಪ್ರದೇಶದ ಭುಂತರ್, ಶಿಮ್ಲಾ ಮತ್ತು ಕಾಂಗ್ರಾ ಗಗ್ಗಲ್, ಚಂಡೀಗಢ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು, ಲಡಾಖ್‌ನ ಲೇಹ್, ರಾಜಸ್ಥಾನದ ಕಿಶನ್‌ಗಢ, ಜೈಪುರ್, ಜೋದ್‌ಪುರ ಮತ್ತು ಬಿಕಾನೇರ್ ಮತ್ತು ಗುಜರಾತ್‌ನ ಮುಂದ್ರ, ಜಾಮ್‌ನಗರ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿತ್ತು.

ಆದ್ರೆ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಏ‌ರ್ ಪೋರ್ಟ್ಗಳನ್ನು ಕಾರ್ಯಾಚರಣೆ ಪುನರಾರಂಭಿಸುತೆ ಭಾರತೀಯ ವಾಯುಸೇನೆ ಸೂಚನೆ ನೀಡಿದೆ.

RELATED ARTICLES

Latest News